ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಪೊಲೀಸ್ ಮೇಲೆ ಹಲ್ಲೆ ಪ್ರಕರಣ- "ದೂರು ಬಂದ್ರೆ ಪೇದೆ ವಿರುದ್ಧವೂ ಕ್ರಮ" ಎಂದ ಎಸ್ಪಿ

ಮಂಡ್ಯ: ಪಾಂಡವಪುರದಲ್ಲಿ ನಡೆದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿ ಸಾಗರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮೇಲ್ನೋಟಕ್ಕೆ ಪೊಲೀಸ್ ಪೇದೆ ಅಭಿಷೇಕ್ ಹಲ್ಲೆ ಮಾಡಿದ್ದಾನೆ ಅಂತ ಕೆಲವರು ವಾದಿಸುತ್ತಿದ್ದಾರೆ. ಆದರೆ, ಅದಕ್ಕೂ ಮುಂಚೆ ಆರೋಪಿ ಹಿರಿಯ ನಾಗರಿಕ ಹಾಗೂ ದೂರುದಾರ ಲಕ್ಷ್ಮಿನಾರಾಯಣ್ ರವರ ಮೇಲೆ ಹಲ್ಲೆಗೆ ಮುಂದಾಗಿ ಠಾಣೆಯಲ್ಲಿ ದಾಂಧಲೆ ಮಾಡಿದ್ದಾನೆ. ‌ಅಷ್ಟೇ ಅಲ್ಲದೆ, ಠಾಣೆಯಲ್ಲಿದ್ದ ಮಹಿಳಾ ಪೇದೆಗಳ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾನೆ.

ಒಂದು ವೇಳೆ ಪೇದೆ ಅಭಿಷೇಕ್ ವಿನಾ ಕಾರಣ ಹಲ್ಲೆ ಮಾಡಿದ್ದನ್ನು ಕಂಡವರಿದ್ದರೆ ದೂರು ನೀಡಿದಲ್ಲಿ ಪೇದೆ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

Edited By : Suman K
Kshetra Samachara

Kshetra Samachara

30/12/2024 04:46 pm

Cinque Terre

10.96 K

Cinque Terre

0