ಮಂಡ್ಯ: ಅಪ್ರಾಪ್ತರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಪ್ರಕರಣದಲ್ಲಿ ಪ್ರಿಯತಮೆಯ ಮನೆಯ ಮುಂದೆ ಪ್ರಿಯತಮ ಜೆಲಿಟನ್ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ.
ನಾಗಮಂಗಲದ ಬಸವೇಶ್ವರ ನಗರದ ಯುವಕ ರಾಮಚಂದ್ರ ನಾಗಮಂಗಲ ಕಾಳೇನಹಳ್ಳಿಯ ಅಪ್ರಾಪ್ತ ಹುಡುಗಿ ಜೊತೆಗೆ ಪ್ರೀತಿ ಪ್ರೇಮ ಅಂತ ಕಳೆದ ವರ್ಷ ಮನೆ ತೊರೆದು ಹೋಗಿದ್ದ. ಆ ವೇಳೆ ಯುವಕನ ವಿರುದ್ಧ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಾಗಿತ್ತು.
ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಯುವತಿ ಮನೆ ಬಳಿ ಹೋಗಿದ್ದ ಯುವಕ ಬಂಡೆಗಳನ್ನ ಸಿಡಿಸುವ ಜಿಲೆಟಿನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಏಕಾಏಕಿ ಜಿಲೆಟಿನ್ ಸಿಡಿದ ಪರಿಣಾಮ ಯುವಕ ದೇಹ ಛಿದ್ರವಾಗಿದ್ದು ಭೀಕರವಾಗಿ ಸಾವನ್ನಪ್ಪಿದ್ದಾನೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
29/12/2024 12:58 pm