ಮಂಡ್ಯ: ಕ್ಯಾತನಹಳ್ಳಿ ಬರ್ಬರ ಹತ್ಯೆ ಪ್ರಕರಣ ಬಳಿಕ ಮಂಡ್ಯ ಜಿಲ್ಲೆ ಜನರಲ್ಲಿ ಒಂದು ರೀತಿಯ ಆತಂಕ ವಾತಾವರಣ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಮನೆಗೆ ಬಂದು ಅಪರಿಚಿತ ವ್ಯಕ್ತಿ ಬಾಗಿಲು ತಟ್ಟಿದಾಗ ಕಳ್ಳ ಎಂದು ತಿಳಿದು ವಿದ್ಯುತ್ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಜಯಂತಿ ನಗರದಲ್ಲಿ ನಡೆದಿರುವ ಘಟನೆ ಇದಾಗಿದ್ದು ಕ್ಯಾತನಹಳ್ಳಿ ಇಂದ ಕೇವಲ ಅರ್ಧ ಕಿ.ಮೀ ದೂರದಲ್ಲೆ ಜಯಂತಿ ನಗರವಿದೆ. ಈ ಘಟನೆ ಹಿನ್ನಲೆ ನೋಡೋದಾದ್ರೆ ನಿನ್ನೆ ಜಯಂತಿನಗರದ ಲಕ್ಷ್ಮಮ್ಮ ಎಂಬುವರ ಮನೆಗೆ ಅಪರಿಚಿತ ವ್ಯಕ್ತಿ ಬರ್ತಾರೆ. ವ್ಯಾಪಾರಕ್ಕಾಗಿ ಗೋಬಿ ಬೇಯಿಸುತ್ತಿದ್ದ ಲಕ್ಷ್ಮಮ್ಮ ಮನೆಗೆ ಬಂದು ಅನಾಮಿಕ ವ್ಯಕ್ತಿ ಬಾಗಿಲು ಬಡಿಯುತ್ತಾನೆ. ಇದನ್ನ ಕಂಡು ಮಹಿಳೆ ಚೀರಾಟ ನಡೆಸಿದ್ದು ತಕ್ಷಣವೇ ಅಕ್ಕಪಕ್ಕದ ಮನೆಯವರು ಓಡಿ ಬರ್ತಾರೆ. ಕಳ್ಳ ಎಂದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದು ಬಳಿಕ ಆತ ಕಳ್ಳ ಅಲ್ಲ ಮಾನಸಿಕ ಅಸ್ವಸ್ಥ ಅಂತ ತಿಳಿಯುತ್ತೆ. ಗದಗದ ಶಿರಹಟ್ಟಿಯಿಂದ ಬಂದಿರುವ ಮಾನಸಿಕ ಅಸ್ವಸ್ಥ ಮಹೇಶ್ ಅಂತ ಗೊತ್ತಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
PublicNext
25/12/2024 01:01 pm