ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸ್ಫೋಟಕ ಸಿಡಿಸಿಕೊಂಡು ಯುವಕ ಆತ್ಮಹತ್ಯೆ ಪ್ರಕರಣ- "ಸ್ಫೋಟದಲ್ಲಿ ಯಾರ ಪಾತ್ರವೂ ಇಲ್ಲ" ಎಂದ ಎಸ್ಪಿ

ಮಂಡ್ಯ: ನಾಗಮಂಗಲ ತಾಲೂಕಿನ ಕಾಳೇನಹಳ್ಳಿಯಲ್ಲಿ ಸ್ಫೋಟಕ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಾಲಕಿಯ ಕುಟುಂಬದ ಪಾತ್ರವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಕಾಳೇನಹಳ್ಳಿ ಪಕ್ಕದ ಬಸವೇಶ್ವರ ನಗರದ 21 ವರ್ಷದ ರಾಮಚಂದ್ರ ಮತ್ತು 17 ವರ್ಷದ ಬಾಲಕಿ ಪ್ರೀತಿಸಿ, 2023ರಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಮೂರು ತಿಂಗಳ ಬಳಿಕ ಪಿಎಸ್ಐ ನೇತೃತ್ವದ ತಂಡ, ತಮಿಳುನಾಡಿನಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರನ್ನೂ ಪತ್ತೆ ಹಚ್ಚಿ ಕರೆತಂದು, ಹುಡುಗಿಗೆ 17 ವರ್ಷ ಆಗಿದ್ದ ಕಾರಣ, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ರಾಮಚಂದ್ರನನ್ನುನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಮೂರು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದಿದ್ದ ರಾಮಚಂದ್ರ, ಬಾಲಕಿ ತಾಯಿ ಬಳಿ ತೆರಳಿ, ಇನ್ನೂ ನಿಮ್ಮ ಮಗಳು ವಿಷಯಕ್ಕೆ ಬರುವುದಿಲ್ಲ. ಪ್ರಕರಣದಿಂದ ತನಗೆ ಮುಕ್ತಿ ಕೊಡಿಸುವಂತೆ ಕೋರಿದ್ದ. ಅದಕ್ಕೆ ಅವರು ಸಮ್ಮತಿಸಿದ್ದ ಪರಿಣಾಮ ಬಿಡುಗಡೆ ಆಗಿದ್ದ.

2 ತಿಂಗಳ ನಂತರ ಬಾಲಕಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ದಾಳೆ ಎಂಬ ಕಾರಣದಿಂದ ಹತಾಶೆಗೊಂಡು, ಈ ಸಂಬಂಧ ತನ್ನ ಮೊಬೈಲ್ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದು, ನಿನ್ನೆ ಮುಂಜಾನೆ 3.30ರ ಸುಮಾರಿಗೆ ಸ್ಫೋಟಕ ಕಟ್ಟಿಕೊಂಡು, ಸಿಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಿವರಿಸಿದರು.

ಆತನ ಸಾವಿಗೆ ಬಾಲಕಿಯ ಮನೆಯವರು ಕಾರಣ ಎಂದು ರಾಮಚಂದ್ರನ ತಂದೆ ದೂರು ನೀಡಿದ್ದಾರೆ. ಆದರೆ, ಸದ್ಯದ ವಿಚಾರಣೆ ಪ್ರಕಾರ ಆತ ಬಾಲಕಿಯ ಮನೆಗೆ ತೆರಳಿ, ಯಾವುದೇ ಗಲಾಟೆ ಮಾಡಿಲ್ಲ. ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಜಿಲೆಟಿನ್ ಅಥವಾ ಇತರ ಸ್ಫೋಟಕ ಬಳಸಿದ್ದು, ಅದು ಯಾವುದು ಮತ್ತು ಅದು ಹೇಗೆ ಆತನಿಗೆ ಸಿಕ್ಕಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.

Edited By : Ashok M
PublicNext

PublicNext

30/12/2024 08:47 pm

Cinque Terre

51.39 K

Cinque Terre

0

ಸಂಬಂಧಿತ ಸುದ್ದಿ