ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಮಂಡ್ಯಕ್ಕೆ ಸುಮಲತಾ ಮರುಪ್ರವೇಶ

ಮಂಡ್ಯ : ಹೊಸ ಮನೆ‌ ಮಾಡಿರುವ ಮಾಜಿ ಸಂಸದೆ ಸುಮಲತಾ‌ ಮತ್ತೊಮ್ಮೆ ರಾಜಕೀಯಕ್ಕೆ ರೀಎಂಟ್ರಿ ಕೊಟ್ಟಿದ್ದಾರೆ.

ಮಂಡ್ಯ ನಗರದ ಬಂದಿಗೌಡ ಬಡಾವಣೆಯಲ್ಲಿ ಹೊಸ ಮನೆ ಬಾಡಿಗೆ ಪಡೆದಿರುವ ಸುಮಲತಾ,ಕೆಲ ದಿನಗಳ ಹಿಂದೆಯೇ ನೂತನ ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ಕಾರ್ಯ ನೆರವೇರಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ನಂತ್ರ ಮಂಡ್ಯ ರಾಜಕಾರಣ ದಿಂದ ಅಂತರ ಕಾಯ್ದು ಕೊಂಡಿದ್ದ ಸುಮಲತಾ ಅಂಬರೀಶ್ ಜನವರಿ ನಂತ್ರ ಮಂಡ್ಯ ರಾಜಕಾರಣದಲ್ಲಿ ಸಕ್ರಿಯೆಗೊಳ್ಳುವ ಬಗ್ಗೆ ಕಳೆದ ನವಂಬರ್‌ನಲ್ಲಿ ಹೇಳಿಕೆ ನೀಡಿದ್ದರು. ಹೇಳಿಕೆಯಂತೆ ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶ ನೇರವೇರಿಸುವ ಮೂಲಕ ಮುಂಬರುವ MLA ಚುನಾವಣೆ ದೃಷ್ಟಿಯಿಂದ ಸುಮಲತಾ ರಣತಂತ್ರ ಹೆಣದಿದ್ದಾರೆ ಎನ್ನುವ ಸೂಚನೆ‌ ನೀಡಿದ್ದಾರೆ.ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸುಮಲತಾ ಅಂಬರೀಷ್ ನಡೆ ಕುತೂಹಲ ಮೂಡಿಸಿದೆ.

Edited By : Ashok M
PublicNext

PublicNext

08/01/2025 03:25 pm

Cinque Terre

22.12 K

Cinque Terre

0

ಸಂಬಂಧಿತ ಸುದ್ದಿ