ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಜ್ಞಾನಭಾರತಿ ಆವರಣದಲ್ಲಿ ಕಸ ಹಾಕಿದ್ರೆ ಸ್ಥಳದಲ್ಲೇ ಬೀಳುತ್ತೆ ದಂಡ..!

ಬೆಂಗಳೂರು : ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣ ಕಸಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು, ಸಾರ್ವಜನಿಕರು ಕ್ಯಾರೆ ಎನ್ನದೇ ಎಲ್ಲಿಂದರಲ್ಲಿ ಕಸ ಹಾಗ್ತಿದ್ರು. ಇದೀಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಸ ಎಸೆಯುವುದು ಕಂಡು ಬಂದರೆ ಸ್ಥಳದಲ್ಲಿ ಭಾರಿ ದಂಡ ವಿಧಿಸುವುದಾಗಿ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣ ಕಸ ಮುಕ್ತ,ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಆಗಿದೆ. ವಿಶ್ವವಿದ್ಯಾಲಯ ವತಿಯಿಂದ ನಿರಂತರ ಸ್ವಚ್ಚತಾ ಕಾರ್ಯವನ್ನು ನಡೆಸಲಾಗುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕರು,ವಾಹನ ಸವಾರರು ಕಸ ಎಸೆಯುವುದು ಕಂಡು ಬಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಕಸ/ತ್ಯಾಜ್ಯ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಿ, ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕರು,ವಾಹನ ಸವಾರರು ಕಸ ಎಸೆಯುವುದು ಕಂಡು ಬಂದಲ್ಲಿ ಸ್ಥಳದಲ್ಲೇ ಭಾರೀ ದಂಡ ವಿಧಿಸಲಾಗುವುದು ಹಾಗೂ ಇದು ಮರುಕಳಿಸಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

Edited By : Abhishek Kamoji
PublicNext

PublicNext

07/01/2025 06:58 pm

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ