ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದ 6 ಮಂದಿ ನಕ್ಸಲರು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ 6 ನಕ್ಸಲರು ಮಂದಿ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲ್ಲೂರು, ರಾಯಚೂರಿನ ಮಾರಪ್ಪ ಅರೋಲಿ, ತಮಿಳುನಾಡಿನ ಕೆ.ವಸಂತ್, ಕೇರಳದ ಟಿ.ಎನ್.ಜೀಶ ಅವರು ಇನ್ಮುಂದೆ ನಕ್ಸಲ್ ಚಟುವಟಿಕೆಯನ್ನ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಡಳಿತ ಮುಂದೆ ಶರಣಾಗಬೇಕಿದ್ದ ಆರು ಮಂದಿ ನಕ್ಸಲರು ಇದೀಗ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದಾರೆ.

ಈ ಹಿಂದೆ‌ 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನೂರು ಶ್ರೀಧರ್, ಸಿರಿಮನೆ ನಾಗರಜ್ ನಕ್ಸಲ್ ಚಟುವಟಿಕೆಯನ್ನ ಬಿಟ್ಟು ಶರಣಾಗತಿಯಾಗಿದ್ದರು.

ಇನ್ನು ನಕ್ಸಲರ ಶರಣಾಗತಿಗೆ ಸಮಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಉಪಸ್ಥಿತಿರಿದ್ದರು.

Edited By : Manjunath H D
PublicNext

PublicNext

08/01/2025 07:30 pm

Cinque Terre

39.7 K

Cinque Terre

6

ಸಂಬಂಧಿತ ಸುದ್ದಿ