ಬೆಂಗಳೂರು : ಪಾಲಿಕೆ ಮಾಜಿ ಕಾರ್ಪೊರೇಟರ್ ಗಳಿಗೆ ಶುರುವಾಯ್ತು ನಡುಕ, ಬಿಬಿಎಂಪಿ ಕೇಂದ್ರ ಕಚೇರಿ ಮೇಲೆ ಇಡಿ ದಾಳಿಯಿಂದ ಮಹತ್ವದ ದಾಖಲೆ ವಶ. KRDL ಪಂಡ್ ವತಿಯಿಂದ ಬೋರ್ ವೆಲ್ ಕೊರೆಸಿರೋ ಬಗ್ಗೆ ಹಾಗೂ ಆರ್. ಓ ಪ್ಲಾಂಟ್ ಬಗ್ಗೆ ಮಹತ್ವದ ದಾಖಲೆಗಳನ್ನು ಇಡಿ ಸಂಗ್ರಹಿಸಿದೆ.
ಬಿಬಿಎಂಪಿ ಅಧಿಕಾರಿಗಳು ಕೊಟ್ಟ ಲೆಕ್ಕಕ್ಕೂ ಇಡಿ ಬಳಿ ಇರೋ ದಾಖಲೆಗೂ ಬಾರಿ ವ್ಯತ್ಯಾಸ ಕಂಡುಬಂದಿದೆ, 43 ಮಾಜಿ ಪಾಲಿಕೆ ಸದಸ್ಯರಿಗೆ ಹಾಗೂ ಅಂದಿನ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಆಯುಕ್ತರ ಮೂಲಕ ನೋಟಿಸ್ ಜಾರಿ ಮಾಡಿಸಲಾಗಿದೆ.
- 01-04-2015 ರಿಂದ 31-12-24 ರ ವರೆಗೆ ಹಂಚಿಕೆಯಾದ ಎಲ್ಲಾ ಸ್ಥಾಯಿ ಸಮಿತಿಯ ನಿರ್ಣಯಗಳ ಪ್ರತಿ ನೀಡಬೇಕು.
- 01-04-2015. ರಿಂದ 31-12-2019 ರವರೆಗಿನ ಮೂರು ಕೋಟಿಯಿಂದ ೧೦ ಕೋಟಿ ವರೆಗೆ ವಲಯವಾರು ಬೋರ್ ವೆಲ್ ಕೋರೆಸಿದ ಹಾಗೂ ಅರ್ ಓ ಪ್ಲಾಂಟ್ ಗಳ ವಿವರ ಒದಗಿಸಿ.
- ಮೂರು ಕೋಟಿ ಗಿಂತ ಹೆಚ್ಚಿನ ಬೋರ್ ವೆಲ್ ಹಾಗೂ ಅರ್ ಓ ಪ್ಲಾಂಟ್ ಗಳ ಕೆಲಸವನ್ನು ಯಾರು ಅನುಮೋದಿಸಿದರೆ. ಈ ಬಗ್ಗೆ ದಾಖಲೆ ನೀಡಬೇಕು.
- BBMP ಯ ಬಜೆಟ್ ವೇಳೆ ಬೋರ್ ವೆಲ್ ಗೆ ಮೀಸಲಿಟ್ಟ ಹಣದ ಮಾಹಿತಿ.
ಹೀಗೆ ಹತ್ತು ಹಲವು ದಾಖಲೆಗಳನ್ನು ನೀಡುವಂತೆ ಕೌನ್ಸಿಲ್ ಸೆಕ್ರೆಟರಿಗೆ ಇಡಿ ಸೂಚಿಸಿದೆ .
ಆ ಅವಧಿಯಲ್ಲಿ ಯಾರು ಕಾರ್ಯ ನಿರ್ವಹಿಸುತ್ತಿದ್ರು. ಈಗ ಅವರು ಎಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಒಂದು ವೇಳೆ ಬೇರೆ ಇಲಾಖೆ ವರ್ಗವಣೆ ಆಗಿದ್ರೆ ಅವರುಗಳ ಮಾಹಿತಿ ಹಾಗೂ ಆ ಅವಧಿಯ ಅವರ ಬ್ಯಾಂಕ್ ಬ್ಯಾಲೆನ್ಸ್ ಶೀಟ್ ಒದಗಿಸಬೇಕು.
ಇಡಿ ಅಧಿಕಾರಿಗಳ ಸೂಚನೆ ಮೇರೆಗೆ ಯಶವಂತಪುರ. ಆರ್ ಆರ್ ನಗರ..ಕೆಆರ್ ಪುರಂ..ಬೊಮ್ಮನಹಳ್ಳಿ ವಲಯಗಳ ಚೀಪ್ ಇಂಜಿನಿಯರ್ ಗಳಿಗೆ ದಾಖಲೆ ಹಾಗೂ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
Kshetra Samachara
09/01/2025 01:38 pm