ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಸಂಬಳಕ್ಕಾಗಿ ತಬರನಂತೆ ಅಲೆಯುತ್ತಿರುವ KSRTC ಚಾಲಕ, ಅಧಿಕಾರಿಗಳ ಕಿರುಕುಳಕ್ಕೆ ಬೇಸರ

ದೊಡ್ಡಬಳ್ಳಾಪುರ : ಮೂತ್ರಕೋಶದ ಶಸ್ತ್ರಚಿಕಿತ್ಸೆಗೊಳಗಾದ KSRTC ಚಾಲಕ ವೈದ್ಯರ ಸಲಹೆಯಂತೆ 3 ತಿಂಗಳು ವಿಶ್ರಾಂತಿ ತೆಗೆದುಕೊಂಡಿದ್ದು, ಅನಾರೋಗ್ಯದ ರಜೆಯನ್ನು ನೀಡದ ಅಧಿಕಾರಿಗಳು ಆತನ 4 ತಿಂಗಳ ಸಂಬಳವನ್ನ ತಡೆ ಹಿಡಿದಿದ್ದಾರೆ. 4 ತಿಂಗಳ ಸಂಬಳಕ್ಕಾಗಿ ತಬರನಂತೆ ಕಛೇರಿಯಿಂದ ಕಛೇರಿಗೆ ಅಲೆಯುತ್ತಿದ್ದಾನೆ. 4 ತಿಂಗಳ ಸಂಬಳವಿಲ್ಲದೇ ಆತನ ಕುಟುಂಬ ಕಣ್ಣೀರು ಹಾಕ್ತಿದೆ.

ದೊಡ್ಡಬಳ್ಳಾಪುರ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಚಾಲಕ ಹೆಚ್.ಸಿ.ಮಂಜುನಾಥ್, ತಾಲೂಕಿನ ಹಾಡೋನಹಳ್ಳಿಯಲ್ಲಿ ವಾಸವಾಗಿರುವ ಈತ ಕಳೆದ 18 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮೂತ್ರಕೋಶ ಮತ್ತು ಶಿಶ್ನಬೀಜದ ಸಮಸ್ಯೆಯಿಂದ ಬಳಲುತ್ತಿದ್ದ ಈತ, ಕಳೆದ ಜುಲೈ ತಿಂಗಳಲ್ಲಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮೂರು ತಿಂಗಳ ವಿಶ್ರಾಂತಿ ಕಡ್ಡಾಯವಾಗಿ ತೆಗೆದುಕೊಳ್ಳ ಬೇಕು, ಇಲ್ಲದಿದ್ದರೆ ಜೀವಕ್ಕೆ ತೊಂದರೆ ಎಂದು ವೈದ್ಯರು ಸಲಹೆ ನೀಡಿದರು. ವೈದ್ಯರ ಸಲಹೆಯಂತೆ ಮಂಜುನಾಥ್ ಮನೆಯಲ್ಲಿದ್ದು ವಿಶ್ರಾಂತಿ ಪಡೆದರು.

ಮಾಧ್ಯಮದೊಂದಿಗೆ ಮಾತನಾಡಿದ ಮಂಜುನಾಥ್ ಪತ್ನಿ ರೇಖಾಮಣಿ, ನಾಲ್ಕು ತಿಂಗಳ ಸಂಬಳ ಕೊಡದೆ ಕಛೇರಿಯಿಂದ ಕಛೇರಿಗೆ ನಮ್ಮನ್ನು ಅಲೆಸುತ್ತಿದ್ದಾರೆ. ನಮ್ಮ ಗಂಡನ ಸಂಬಳ ನಂಬಿಕೊಂಡು ಇಬ್ಬರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಅತ್ತೆ ಮಾವ ಇದ್ದಾರೆ. ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತ ನನ್ನ ಗಂಡ ಸಾವಿಗೆ ಶರಣಾಗುವ ಮಾತನಾಡುತ್ತಿದ್ದಾರೆ. ದಯಮಾಡಿ ನಮ್ಮ ಗಂಡನ 4 ತಿಂಗಳ ಕೊಡಿಸುವಂತೆ ಮನವಿ ಮಾಡಿದರು .

Edited By : Suman K
PublicNext

PublicNext

09/01/2025 06:59 pm

Cinque Terre

20.96 K

Cinque Terre

2

ಸಂಬಂಧಿತ ಸುದ್ದಿ