ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ವಿಜೃಂಭಣೆಯಿಂದ ಜರುಗಿದ ದಾಸೋಹ ಮಠದ ರಥೋತ್ಸವ

ಅಣ್ಣಿಗೇರಿ:ಪಟ್ಟಣದ ಲಿಂ.ರುದ್ರಮುನಿ ಮಹಾಸ್ವಾಮಿಗಳ 61 ನೇ ಪುಣ್ಯ ಸ್ಮರಣೋತ್ಸವ ಜಾಗೂ ಜಾತ್ರಾ ಮಹೋತ್ಸವದ ರಥೋತ್ಸವ ಅಪಾರ ಭಕ್ತರ ಹರ್ಷೋದ್ಘಾರಗಳ ಮಧ್ಯ ಸಡಗರ ಸಂಭ್ರಮದಿಂದ ಜರುಗಿತು. ರಥೋತ್ಸವಕ್ಕೆ ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಜಿ, ಕೀರ್ತನ ಕೇಸರಿ ಗುರುನಾಥ ಶಾಸ್ತ್ರಿ ಸೇರಿದಂತೆ ಮೊದಲಾದ ಮಠಾಧಿಪತಿಗಳು ಚಾಲನೆ ನೀಡಿದರು. ರಥದಲ್ಲಿ ಮಠದ ಪೀಠಾಧಿಪತಿ ಶಿವಕುಮಾರ ಮಹಾಸ್ವಾಮಿಜಿ ಆಶಿನರಾಗಿದ್ದರು.

ರಥೋತ್ಸವದಲ್ಲಿ ಪಟ್ಟಣದ ವಿವಿಧ ವಾಧ್ಯ ಮೇಳಗಳು ಭಾಗವಹಿಸಿ ರಥೋತ್ಸವಕ್ಕೆ ಮೆರಗನ್ನು ತಂದು ಕೊಟ್ಟವು. ರಥೋತ್ಸವ ನಿಮಿತ್ತ ಶ್ರೀ ಮಠದಲ್ಲಿ ಮುಂಜಾನೆಯಿಂದಲೆ ಪೂಜೆ ಕೈಂಕರ್ಯಗಳು ಜರುಗಿರುವುದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸೇರಿದಂತೆ ಅಪಾರ ಭಕ್ತ ಸಮೂಹ ಪಾಲ್ಗೊಂಡಿತ್ತು.

Edited By : PublicNext Desk
Kshetra Samachara

Kshetra Samachara

06/01/2025 07:42 pm

Cinque Terre

28.05 K

Cinque Terre

0

ಸಂಬಂಧಿತ ಸುದ್ದಿ