ಅಣ್ಣಿಗೇರಿ : ಪಟ್ಟಣದ ಬ್ರಹ್ಮಕ್ಯ ಶ್ರೀ ಪ್ರೋತ್ರಿಯ ಬ್ರಹ್ಮ ಸದ್ಗುರು ರುದ್ರಮನಿ ಮಹಾಸ್ವಾಮಿಗಳ 61ನೇ ಜಾತ್ರಾ ಮಹೋತ್ಸವ ಹಾಗೂ ಪುಣ್ಯಸ್ಮರಣೋತ್ಸವದ ನಿಮಿತ್ಯ ಏರ್ಪಡಿಸಿದ್ದ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿದ ಪಟ್ಟಣದಲ್ಲಿ ಜರುಗಿತು.ಪಲ್ಲಕ್ಕಿ ಉತ್ಸವಕ್ಕೆ ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮಿಜಿ ಚಾಲನೆ ನೀಡಿ ಪಲ್ಲಕ್ಕಿಯಲ್ಲಿ ಆಶಿನರಾಗಿರುವುದು ವಿಶೇಷವಾಗಿತ್ತು. ಪಲ್ಲಕ್ಕಿ ದಾಸೋಹ ಮಠದಿಂದ ಆರಂಭಗೊಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಶ್ರೀ ಮಠದ ತವರು ಮನೆಯಾದ ಜಾಡಗೇರಿ ಓಣಿಗೆ ತೆರಳಿ ಪೂಜೆ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.ಪಲ್ಲಕ್ಕಿ ಉತ್ಸವದಲ್ಲಿ ಪುರವಂತರ ತಂಡದ ಆಕರ್ಷಣೆ ಎಲ್ಲರ ಗಮನ ಸೆಳೆಯುವಂತಿತ್ತು. ಸ್ಥಳೀಯ ಕುರುಬಗೇರಿ ಓಣಿ, ಹುಡೇದ ಬಯಲು,ವಾಲ್ಮೀಕಿ ನಗರ,ಲಿಂಬಿಕಾಯಿ ಓಣಿ ಹಾಗೂ ಅಂಬೇಡ್ಕರ ನಗರದ ಕೋಲಾಟ,ನೃತ್ಯ, ಮಜಲುಗಳು ಭಾಗವಹಿಸಿ ಪಲ್ಲಕ್ಕಿ ಉತ್ಸವಕ್ಕೆ ಮೆರಗನ್ನು ತಂದು ಕೊಟ್ಟವು.ಇನ್ನು ಈ ಪಲ್ಲಕ್ಕಿ ಉತ್ಸವದಲ್ಲಿ ದಾಸೋಮಠದ ಆಡಳಿತ ವರ್ಗ ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
05/01/2025 03:30 pm