ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ:ದಾಸೋಹ ಮಠದ ಜಾತ್ರಾ ಮಹೋತ್ಸವದ ಎರಡನೆಯ ದಿನದ ವೇದಾಂತ ಪರಿಷತ್ತು

ಅಣ್ಣಿಗೇರಿ:ಪಟ್ಟಣದ ದಾಸೋಹ ಮಠದ ಬ್ರಹ್ಮಕ್ಯ ಶ್ರೀ ಶೋ.ಸದ್ಗುರು ರುದ್ರಮುನಿ ಮಹಾಸ್ವಾಮಿಗಳ 61ನೇ ಪುಣ್ಯಸ್ಮರಣೋತ್ಸವ ಹಾಗೂ ಮಹಾರಥೋತ್ಸವದ ವೇದಾಂತ ಪರಿಷತ್ತಿನ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಇಂದು ಎರಡನೇ ದಿನದ ಕಾರ್ಯಕ್ರಮ ನೆರವೇರಿತು.

ಇನ್ನೂ ಎರಡನೇ ದಿನದ ಕಾರ್ಯಕ್ರಮದಲ್ಲಿ ಶರಣಸಂಕುಳದ ಮಾನಸ ನಿಜಸಂಗ ಎಂಬ ವಿಷಯದ ಬಗ್ಗೆ ಮಾತೃಶ್ರೀ ತಾಯಿಗಳು ಭಕ್ತಾದಿಗಳಿಗೆ ತಿಳಿಸಿದರು.ದಾಸೋಮಠದ ಡಾ.ಶಿವಕುಮಾರ ಶ್ರೀಗಳು ಮಾತನಾಡಿ, ಭಕ್ತಾದಿಗಳು ವೇದಾಂತ ಸಮಾರಂಭದಲ್ಲಿ ಪ್ರತಿದಿನವೂ ಒಂದೊಂದು ವಿಷಯಗಳ ಬಗ್ಗೆ ಜ್ಞಾನಿಗಳಿಂದ ತಿಳಿಸಲಾಗುವುದು ಭಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಶ್ರೀ.ಮ.ನಿ.ಪ್ರ.ಪ್ರಭುಲಿಂಗ ಮಹಾಸ್ವಾಮಿಗಳು ಶ್ರೀ ಗುದ್ದೇಶ್ವರಮಠ, ನೀಲಗುಂದ,ಶ್ರೀ ಪ್ರೋ. ಬ್ರ.ಶಂಕರಾನಂದ ಮಹಾಸ್ವಾಮಿಗಳು ಮುಕ್ತಶ್ವೇಶ್ವರಮಠ ಗದಗ,ಬಸವರಾಜ್ ಶಾಸ್ತ್ರಿಗಳು,ಶ್ರೀ ಷ.ಬ್ರ. ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಈರಾಲಿಂಗೇಶ್ವರಮಠ, ಹೊಸಯರಗುದ್ರಿ ಸಾನಿಧ್ಯ ವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

01/01/2025 09:36 pm

Cinque Terre

101.67 K

Cinque Terre

0

ಸಂಬಂಧಿತ ಸುದ್ದಿ