ಅಣ್ಣಿಗೇರಿ: 2024 25 ನೆಯ ಸಾಲಿನ ಹಿಂಗಾರು ಬೆಳೆ ಸಮೀಕ್ಷೆ ಮಾಡುವಂತೆ ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆಎಸ್ ಪಾಟೀಲ್ ಅವರು ಇಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಬೆಳೆ ಸಮೀಕ್ಷೆ ಮಾಡಲು ಪ್ರಾರಂಭವಾಗಿದ್ದು ರೈತರು ತಮ್ಮ ಬೆಳೆದ ಎಲ್ಲ ಹಿಂಗಾರು ಬೆಳೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ,ಬೆಳೆ ಪರಿಹಾರ,ಬೆಳೆ ಹಾನಿ, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಯೋಜನೆಗಳು ಸಿಗುವಂತಾಗಬೇಕಾದರೆ ಬಳಿ ಸಮೀಕ್ಷೆ ಕಡ್ಡಾಯವಾಗಿರುತ್ತದೆ.ಆದ ಕಾರಣ ರೈತರು ಹಿಂಗಾರು ಬೆಳೆ ಸಮೀಕ್ಷೆ 2024 ಆಪ್ ನಲ್ಲಿ ಎಲ್ಲ ವಿವರಗಳನ್ನು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
Kshetra Samachara
02/01/2025 05:24 pm