ನವಲಗುಂದ: ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕ ಮಹಿಳೆಯರನ್ನು ಕಿರುಕುಳ ನೀಡಿ ಶೋಷಣೆ ಮಾಡುತ್ತಿರುವ ಮೈಕ್ರೋ ಪೈನಾನ್ಸ್ ಸೇರಿ ಇನ್ನಿತರೇ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕಾ ಘಟಕದಿಂದ ತಾಲೂಕಾ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರಗಳು ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ನೀಡುವುದಕ್ಕೆ ವಿಳಂಬ ಹಾಗೂ ಸಿವಿಲ್ ಕಾರಣ ಹೇಳುವುದನ್ನು ಬಿಟ್ಟು ಸಾಲ ಮತ್ತು ಸಹಾಯಧನ ಒದಗಿಸಬೇಕು.
ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಮತ್ತು ಗ್ರಾಮ ಪಂಚಾಯತ ಅನುದಾನ ದುರ್ಬಳಕೆಯನ್ನು ತಡೆಹಿಡಿಯಬೇಕು ಹಾಗೂ ಈ ಅನುದಾನದಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ತನಿಖೆ ಕೈಗೊಳ್ಳಬೇಕು.
ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರರವರಿಗೆ ಅವಮಾನ ಮಾಡಿರುವ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕ್ರಮ ಹಾಗೂ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿರುವ ಮಾರಾಟ ಮಳಿಗಳನ್ನು ಮರು ಹರಾಜು ಮಾಡಬೇಕು.
ನವಲಗುಂದ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸಂಘಟನೆ ಮುಖಂಡರಿಗೆ ಸರಿಯಾಗಿ ಸ್ಪಂದನೆ ಮಾಡದಿರುವ ಇಲಾಖಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಕ್ಕೊತ್ತಾಯಿಸಿ ಬೆಳಿಗ್ಗೆಯಿಂದ ರಾತ್ರಿವರೆಗೂ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ ಸುಧೀರ ಸಾಹುಕಾರ ಕೆಲವು ಬೇಡಿಕೆ ಈಡೇರಿಸುವ ಕುರಿತು ಲಿಖಿತ ಪತ್ರ ನೀಡಿದ ನಂತರ ಪ್ರತಿಭಟನೆ ಮುಗಿಯಿತು.
ತಾ.ಪಂ.ಇಓ ಭಾಗ್ಯಶ್ರೀ ಜಹಾಗೀರದಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ, ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕರಾದ ಎಂ ಗೋಪಿ ಸಿಪಿಐ ಬಸವರಾಜ ಕಾಮನಬೈಲ, ಹರ್ಷವರ್ಧನ ಹಂಚಿನಾಳ, ಎಸ್ ಬಿ ತೋಟದ, ಪ್ರತಿಭಟನಾಕಾರರಾದ ಶಿವು ಪೂಜಾರ್, ನಿಂಗಪ್ಪ ಕೆಳಗೇರಿ,ಮಂಜುನಾಥ ಮಾದರ,ಮಾದೇವ ಬಾಗೂರ, ಯಲ್ಲಪ್ಪ ಮಾದರ, ಶರಣಪ್ಪ ಮಾದರ, ರಾಮಪ್ಪ ಮಾದರ, ವೀರಪ್ಪ ಆಮ್ಮಣ್ಣವರ, ಗದಿಗೆಪ್ಪ ಯಕ್ಕೆರಪ್ಪನವರ, ಮಂಜುಳಾ ಹೊಸಮನಿ, ಶಿವಗಂಗವ್ವ ಭೋವಿ ಇದ್ದರು.
Kshetra Samachara
04/01/2025 06:59 pm