ಸಾಗರ : ಭಕ್ತಿ ಮತ್ತು ಶ್ರದ್ಧೆ ಇದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ. ಸತತ 19 ವರ್ಷಗಳಿಂದ ಇಡುಗುಂಜಿಗೆ ಪಾದಯಾತ್ರೆ ಮೂಲಕ ಹೋಗಿ ಬರುತ್ತಿರುವುದು ಸ್ಮರಣೀಯ ಸಂಗತಿ ಎಂದು ದೈವಜ್ಞ ಸಮಾಜದ ಅಧ್ಯಕ್ಷ ಮೋಹನ್ ಶೇಟ್ ತಿಳಿಸಿದರು.
ಇಲ್ಲಿನ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಇಡುಗುಂಜಿ ಪಾದಯಾತ್ರಿಗಳ ಬಳಗದ ವತಿಯಿಂದ ಹಮ್ಮಿಕೊಡಿರುವ 19ನೇ
ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ದೈವಜ್ಞ ಸಮಾಜದ ಬಂಧುಗಳು ಪಾದಯಾತ್ರೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಎಲ್ಲ ಸಮಾಜ ಬಾಂಧವರು ಜೊತೆಗೆ ಹೆಜ್ಜೆ ಹಾಕುತ್ತಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹಿಂದೆ ವಾಹನ ವ್ಯವಸ್ಥೆ ಇರಲಿಲ್ಲ. ಆಗ ಪಾದಯಾತ್ರೆ ಮೂಲಕವೇ ದೇವಸ್ಥಾನಗಳಿಗೆ ಹೋಗಬೇಕಾಗಿತ್ತು. ಆದರೆ ಈಗ ಎಲ್ಲ ಸೌಲಭ್ಯ ಇದ್ದಾಗ್ಯೂ ಪಾದಯಾತ್ರೆ ಮೂಲಕ ಇಡುಗುಂಜಿ ದೇವರ ದರ್ಶನಕ್ಕೆ ಹೋಗುತ್ತಿರುವುದು ಶ್ರದ್ಧೆ ಮತ್ತು ಭಕ್ತಿಯ ಸಂಕೇತವಾಗಿದೆ. ಪಾದಯಾತ್ರೆ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಜಗದೀಶ್ ಜಿ. ಕುರ್ಡೇಕರ್,ರಾಘವೇಂದ್ರ, ಅಶೋಕ್, ಮಂಜುನಾಥ್, ನಾರಾಯಣ, ವಾಸುದೇವ, ರೆಡ್ಡಿ, ಪ್ರಶಾಂತ್, ನಾಗರಾಜ್, ಸಂದೀಪ್ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
04/01/2025 04:15 pm