ಕಲಘಟಗಿ : ಸತತ 20 ವರ್ಷಗಳ ಕಾಲ ದೇಶ ಸೇವೆಗೈದು ತಮ್ಮೂರಿಗೆ ಮರಳಿದ ಯೋಧನಿಗೆ ಭರ್ಜರಿ ಮೆರವಣಿಗೆ ಸ್ವಾಗತವನ್ನು ದುಂಡಸಿ ಗ್ರಾಮಸ್ಥರು ಕೋರಿದ್ದಾರೆ.
ಹೌದು ! ದುಂಡಸಿ ಗ್ರಾಮದಲ್ಲಿ ಸಾಮಾನ್ಯ ರೈತಾಪಿ ಕುಟುಂಬದಲ್ಲಿ ಜನಿಸಿದ ಬಾಹುಬಲಿ ಜೈನರ್ ವಿದ್ಯಾಭ್ಯಾಸದ ಬಳಿಕ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಕುಟುಂಬದ ಕಷ್ಟಕ್ಕೆ ಆಸರೆಯಾಗಿ 2005 ರ ಜೂನ್ 29 ರಲ್ಲಿ ನಡೆದ ಸೈನಿಕ ರ್‍ಯಾಲಿಯಲ್ಲಿ ಭಾಗವಹಿಸಿ 2006 ಅಕ್ಟೋಬರ್'ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು.
ಭಾರತ ದೇಶಾದ್ಯಂತ ಅಸ್ಸಾಂ, ಪಂಜಾಬ್, ಸಿಕ್ಕಿಂ, ಜಮ್ಮುಕಾಶ್ಮೀರ, ಅರುಣಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ದುಂಡಸಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮೂಲಕ ಬೃಹತ್ ಸ್ವಾಗತ ಸಮಾರಂಭವೇ ನಡೆದಿದೆ.
ತಂದೆ ಬಸವಂತಪ್ಪ, ತಾಯಿ ಸಾವಕ್ಕ ದಂಪತಿ ಮಗನಾದ ಯೋಧ ಬಸವಂತಪ್ಪ ಜೈನರ್ ಅವರನ್ನು ತೆರೆದ ಸಾರೋಟದ ಮೆರವಣಿಗೆಯಲ್ಲಿ ಕೇಸರಿ, ಬಿಳಿ, ಹಸಿರು ಧ್ವಜಗಳ ಮಧ್ಯೆ ಹೂಮಳೆ ಸುರಿಸಿ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಸಾಯಂಕಾಲ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಯೋಧನ ಸಾಧನೆ ಅನಾವರಣ ಮಾಡಿ ಯುವ ಜನರಿಗೆ ಸ್ಫೂರ್ತಿ ನೀಡಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2025 04:15 pm