ಚೆಳ್ಳಕೆರೆ: ಚೆಳ್ಳಕೆರೆ ನಗರದ ನೆಹರು ವೃತ್ತದ ಬಳಿ ಕೆಎಸ್ ಆರ್ ಟಿ ಸಿ ಬಸ್ ಚಾಲಕ ಹಾಗೂ ಕಬ್ಬಿಣದ ಪೈಪು ತುಂಬಿದ ಲಾರಿ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಕೈ ಕೈಮಿಲಾಸುವವರೆಗೂ ಹೋದ ಘಟನೆ ನಡೆಯಿತು.
ಪಾವಗಡ ಕಡೆಯಿಂದ ಕೆಎಸ್ಆರ್ಟಿಸಿ ಬಸ್ ಬಂದು ನೆಹರು ಸರ್ಕಲ್ ಬಳಿ ಪ್ರಯಾಣಿಕರನ್ನು ಇಳಿಸುತ್ತಿರುವಾಗ ಚಿತ್ರದುರ್ಗದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಬೇಕಾಗುವಂತಹ ಕಬ್ಬಿಣದ ಪೈಪು ತುಂಬಿಕೊಂಡು ಬಂದ ಲಾರಿ ಚಾಲಕ ಲಾರಿಯನ್ನ ನೆಹರು ವೃತ್ತದ ಬಳಿ ತಂದು ನಿಲ್ಲಿಸಿ ಕಾರಣ ಸ್ವಲ್ಪ ಹೊತ್ತು ಟ್ರಾಫಿಕ್ ಉಂಟಾಯಿತು. ಈ ವೇಳೆ ಲಾರಿ ಚಾಲಕ ಹಾಗೂ ಸರ್ಕಾರಿ ಬಸ್ ಚಾಲಕನ ನಡುವೆ ಒಬ್ಬರಿಗೊಬ್ಬರ ಗಲಾಟೆ ಮಾಡಿಕೊಂಡರು.ನಂತರ ಪೋಲೀಸ್ ರು ಸ್ಥಳಕ್ಕೆ ಹಾಗಮಿಸಿ ಇಬ್ಬರಿಗೂ ತಿಳಿಹೇಳಿ ವಾಹನ ತೆರವುಗೊಳಿಸಿದರು...
Kshetra Samachara
03/01/2025 08:21 am