ನೆಲಮಂಗಲ ಸಮೀಪದಲ್ಲಿ ನಡೆದಿದ್ದ ಟ್ರಕ್ ಅಪಘಾತದ ಮಾದರಿಯಲ್ಲಿ, ಚಿತ್ರದುರ್ಗದ ಹಿರಿಯೂರು ಸಮೀಪ ಕೂಡಾ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹಿರಿಯೂರು ನಗರದ ಪ್ರವಾಸಿ ಮಂದಿರ ಬಳಿ ಚಲಿಸುತ್ತಿದ್ದ ಟ್ರಕ್ ಟೈಯರ್ ಬ್ಲಾಸ್ಟ್ ಆಗಿ, ಡಿವೈಡರ್ ಹತ್ತಿ, ಮತ್ತೊಂದು ಬದಿಗೆ ಉರುಳಿ ಉರುಳಿ ಬಿದ್ದಿದೆ.
ಘಟನೆಯಲ್ಲಿ ತಮಿಳುನಾಡಿನ ಓರ್ವ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದೆ. ಕೊಯಮತ್ತೂರಿಂದ ಪೂನಾ ಕಡೆ ಕೋರಿಯರ್ ವಸ್ತುಗಳಳನ್ನ ಕೊಂಡೋಯ್ಯುತ್ತಿದ್ದ ಲಾರಿ ಅಪಘಾತವಾಗಿದೆ. ಟ್ರಕ್ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿದೆ. ಘಟನಾ ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
Kshetra Samachara
03/01/2025 07:15 pm