ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಳ್ಳತನವಾಗಿದ್ದ ಚಿನ್ನಾಭರಣ ಹಸ್ತಾಂತರ

ಚಿತ್ರದುರ್ಗ : ಕೋಟೆ ಚಿತ್ರದುರ್ಗ ಜಿಲ್ಲೆ ಮಧ್ಯ ಕರ್ನಾಟಕದ ಹೆಬ್ಬಾಗಿಲು. ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಕಳ್ಳರ ಹಾವಳಿ ಮೀತಿ ಮೀರಿತ್ತು. ಆದರೆ ಜಿಲ್ಲೆಯಲ್ಲಿ ಕ್ರೈಂ ಆ್ಯಕ್ಟಿವಿಟಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಹತ್ತಾರು ಪ್ಲಾನ್ ಗಳನ್ನ ಮಾಡ್ತಾನೆ ಬಂದಿದೆ. ಈ ನಡುವೆ 2024 ರಲ್ಲಿ ಜಿಲ್ಲೆಯ ನಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಮನೆ ಕಳ್ಳತನ, ದರೋಡೆ, ರಾಬರಿಯಂತ ಅಪರಾಧ ಕೃತ್ಯಗಳ ಮೂಲಕ ಜಿಲ್ಲೆಯಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಕಳ್ಳತನ ಮಾಡಿದ್ದರು. ಆದರೆ ಜಿಲ್ಲಾ ಪೊಲೀಸ್ ಇಲಾಖೆ ಇಂಥ ದುಷ್ಕೃತ್ಯ ಮೆರೆದಿದ್ದ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಕೊನೆಗೂ ಸಕ್ಸಸ್ ಆಗಿದೆ. ಸುಮಾರು 2.5 ಕೋಟಿ ಅಧಿಕ ಮೌಲ್ಯದ ಮಾಲನ್ನ ಜಪ್ತಿ ಮಾಡಿದೆ.

ಪತ್ತೆಯಾಗಿದ್ದ ವಸ್ತುಗಳನ್ನ ಜಿಲ್ಲಾ ಪೊಲೀಸ್ ಇಲಾಖೆ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರೂ ನೇತೃತ್ವದಲ್ಲಿ, ಇಂದು ವಾರಸುದಾರರಿಗೆ ವಾಪಸ್ ಮಾಡಲಾಗಿದೆ. ನಗರದ DAR ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಮೂಲಕ ಚಿನ್ನಾಭರಣ ಕಳೆದುಕೊಂಡಿದ್ದ ವಾರಸುದಾರರಿಗೆ ವಾಪಸ್ ನೀಡಲಾಗಿದ್ದು, ಕಳೆದುಕೊಂಡಿದ್ದ ಸಾರ್ವಜನಿಕರು ಸಂಸತಗೊಂಡಿದ್ದಾರೆ.

ಇನ್ನೂ 2 ಕೆ.ಜಿಯಷ್ಠು ಬಂಗಾರ, 22 KG ಬೆಳ್ಳಿ, 81 ಬೈಕ್, 3 ಕಾರ್, 430 ಮೊಬೈಲ್, 5 ಬಾರಿ ಗಾತ್ರದ ವಾಹನಗಳನ್ನ ಜಿಲ್ಲಾ ಪೊಲೀಸ್ ಇಲಾಖೆ ವಾರಸುದಾರರಿಗೆ ಹಿಂದಿರುಗಿಸಿದೆ. ಅಲ್ದೆ ಸಾರ್ವಜನಿಕರಲ್ಲಿ ಸೈಬರ್ ಕ್ರೈಂ, ಟ್ರಾಫಿಕ್ ನಿಯಮಗಳ ಜಾಗೃತಿ, ಮಹಿಳಾ ಕಾನೂನು ಗಳ ಕುರಿತು ಕೂಡಾ ಜಾಗೃತಿ ಮೂಡಿಸುವ ಸಲುವಾಗಿ, ವಸ್ತು ಪ್ರದರ್ಶನ ಮಾಡಲಾಯಿತು. ಇನ್ನೂ ಇದೇ ವೇಳೆ ಹಲವು ಶಾಲಾ- ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದರು. ಈ ವೇಳೆ ASP ಕುಮಾರಸ್ವಾಮಿ, DYSP ದಿನಕರ್ ಸೇರಿ ಹಲವು ಅಧಿಕಾರಿಗಳು ಕೂಡಾ ಭಾಗಿಯಾಗಲಿದ್ದರು.

Edited By : PublicNext Desk
Kshetra Samachara

Kshetra Samachara

04/01/2025 02:31 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ