ಚಿತ್ರದುರ್ಗದ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಲಕ್ಷ ಲಕ್ಷ ಹಣ ವಂಚಿಸಿದ್ದಾರೆ. ನಗರ ವಿಧ್ಯಾ ನಗರ ನಿವಾಸಿ ನಾರಾಯಣ ಮೂರ್ತಿ ಎಂಬ ವ್ಯಕ್ತಿಗೆ ವಂಚನೆಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಅನಾಮಧೇಯ ಸಂಖ್ಯೆಯ ಮೊಬೈಲ್ ನಂಬರ್ ನಿಂದ ಮೆಸೇಜ್ ಕಳಿಸಿದ್ದು, ಅಮೇರಿಕನ್ ಡಾಲರ್ ಮೇಲೆ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿದ್ದ.
ಇದನ್ನೇ ನಂಬಿದ್ದ ನಾರಾಯಣ ಮೂರ್ತಿ ಎಂಬುವವರು ವಿವಿಧ ಬ್ಯಾಂಕ್ ಖಾತೆಗಳಿಂದ 9 ಲಕ್ಷದ 97 ಸಾವಿರ ರೂಪಾಯಿ ಹಣ ಹೂಡಿದ್ದು, ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಪಂಗನಾಮ ಹಾಕಿದ್ದಾರೆ. ಕೂಡಲೇ ಚಿತ್ರದುರ್ಗದ ಸೈಬರ್ ಕ್ರೈಮ್ ಠಾಣೆ ಮೆಟ್ಟಿಲು ಹತ್ತಿರುವ ನಾರಾಯಣ ಮೂರ್ತಿ, ಕೇಸ್ ಕೂಡಾ ದಾಖಲಿಸಿದ್ದಾರೆ. IT ಕಾಯ್ದೆ 66/D, 66/C ಹಾಗೂ BNS ಕಾಯ್ದೆ 318/2, 319/2 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
Kshetra Samachara
04/01/2025 11:42 am