ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: 5ನೇ ತರಗತಿ ವಿದ್ಯಾರ್ಥಿಗಳ ಅಪಹರಣ ಯತ್ನ- ಬೆಚ್ಚಿ ಬಿದ್ದ ಗ್ರಾಮದ ಜನ

ಹಿರಿಯೂರು: ಇದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮ. ಇದೇ ಊರಿನ ಕಣಜನಹಳ್ಳಿ ರಸ್ತೆಯಲ್ಲಿ ನವೋದಯ ಪರೀಕ್ಷೆಗೆ ಟ್ಯೂಷನ್ ಮಾಡಲಾಗುತ್ತದೆ. ಈ ಟ್ಯೂಷನ್ ಕೇಂದ್ರಕ್ಕೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಬರ್ತಾರೆ. ಆದರೆ, ಡಿ.31ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಟ್ಯೂಷನ್ ಕೇಂದ್ರದ ಸಮೀಪ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು!

ಹೌದು, ಈ ಅಕ್ಷರ ಕಲಿಕಾ ಕೇಂದ್ರಕ್ಕೆ ಬಂದಿದ್ದ ಯಶ್ವಿನ್ ಗೌಡ (11), ಜೀವನ್ ಗೌಡ (11) ಎಂಬ ಇಬ್ಬರು ಬಾಲಕರನ್ನು ಕ್ಷಣ ಮಾತ್ರದಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು! ಟ್ಯೂಷನ್ ಕೇಂದ್ರದ ಹೊರಭಾಗದ ಜಾಲಿ ಗಿಡಗಳ ನಡುವೆ ಇರುವ ಶೌಚಾಲಯಕ್ಕೆ ತೆರಳಿದ್ದ ಈ ಇಬ್ಬರು ವಿದ್ಯಾರ್ಥಿಗಳನ್ನು ನಾಲ್ಕು ಮಂದಿ ಮುಸುಕುಧಾರಿಗಳು ಓಮ್ನಿಯಲ್ಲಿ ಕಿಡ್ನ್ಯಾಪ್ ಮಾಡಿ, ಬಾಲಕರ ಮುಖಕ್ಕೆ ರಾಸಾಯನಿಕ ಸ್ಪ್ರೇ ಮಾಡಿದ್ರು.

ಕೂಡಲೇ ಬಾಲಕರು ಮೂರ್ಛೆ ಹೋಗುತ್ತಿದ್ದಂತೆಯೇ ಅಲ್ಲಿಂದ PD ಕೋಟೆ ಕಡೆ ಅಪಹರಣಕಾರರು, ಬಾಲಕರನ್ನು ಕರೆದೊಯ್ದಿದ್ದರು. ಆದರೆ, ಸುಮಾರು 10 ಕಿಲೋ ಮೀಟರ್ ದೂರಕ್ಕೆ ಹೋಗುತ್ತಿದ್ದಂತೆಯೇ ಈ ಇಬ್ಬರು ಬಾಲಕರ ಫೋಟೋವನ್ನು ಕಿಡ್ನ್ಯಾಪರ್ಸ್ ಕಿಂಗ್ ಪಿನ್ ಗೆ ಕಳಿಸಿದ್ದರು. ಆದರೆ, ಕಿಂಗ್ ಪಿನ್ ಕೊಟ್ಟಿದ್ದ ಸುಪಾರಿ ಮಿಸ್ಸಾಗಿದ್ದು ಪಕ್ಕಾ ಆಗ್ತಿದ್ದಂತೆಯೇ ನಡುರಸ್ತೆಯಲ್ಲಿ ಇಬ್ಬರು ಬಾಲಕರನ್ನು ತಳ್ಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅಂತೂ ಟ್ಯೂಷನ್ ಗೆ ಬಂದಿದ್ದ ಮುಗ್ಧ ಬಾಲಕರ ಕಿಡ್ನ್ಯಾಪ್ ವಿಫಲವಾಗಿದ್ದು, ಸಂತಸದ ಸಂಗತಿ. ಆದರೆ, ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಪೋಷಕರಲ್ಲೂ ಆತಂಕ ಮೂಡಿಸಿದೆ. ಆದರೆ, ಯಾರನ್ನು ಕಿಡ್ನ್ಯಾಪ್ ಮಾಡಲು ಈ ದುಷ್ಕರ್ಮಿಗಳು ಬಂದಿದ್ರು ಅನ್ನೋ ಪ್ರಶ್ನೆ ಕಾಡ್ತಿದೆ. ಸ್ಥಳಕ್ಕೆ ಅಬ್ಬಿನಹೊಳೆ PSI ಬಾಹುಬಲಿ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.

Edited By : Shivu K
PublicNext

PublicNext

02/01/2025 07:10 pm

Cinque Terre

52.17 K

Cinque Terre

0