ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಅಳಿವಿನ ಅಂಚಿನಲ್ಲಿರು ಕೋಟೆಗೆ ಸಿಗುವುದೆ ಕಾಯಕಲ್ಪ..

ಚಳ್ಳಕೆರೆ : ಚಿತ್ರದುರ್ಗ ನಗರಪ್ರದೇಶದಿಂದ 5-6 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಕೇಂದ್ರ ದೊಡ್ಡೇರಿ ಗ್ರಾಮದಲ್ಲಿ ಕ್ರಿ.ಶ. 1689-1721ರಲ್ಲಿ ನಿರ್ಮಿಸಿದ ಕಲ್ಲು-ಮಣ್ಣಿನ ಮಿಶ್ರಿತ 30-40 ಅಡಿ ಎತ್ತರದ ಕೋಟೆ ಅಳಿವಿನ ಅಂಚಿನಲ್ಲಿದ್ದು, ಕಾಯಕಲ್ಪಕ್ಕಾಗಿ ಕಾದಿದೆ.

ಕೋಟೆ ಮತ್ತು ಬುರುಜು ಎರಡೂ ಶಿಥಿಲಗೊಂಡು ಕುಸಿದು ಬಿದ್ದಿವೆ. ಕೋಟೆಯ ಸುತ್ತ ಮತ್ತು ಮೇಲೆ ಸೀಮೆಜಾಲಿ ಗಿಡಗಳು ಬೆಳೆದು ನಿಂತಿವೆ. ಕೋಟೆ ತಳಪಾಯಕ್ಕೆ ಹಾಕಿದ್ದ ಕಲ್ಲುಗಳು ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಕೋಟೆ ಸಾಲು ಮಣ್ಣಿನ ದಿಬ್ಬವಾಗಿ ಪರಿವರ್ತನೆಗೊಂಡಿದೆ. ಇರುವ ಕಂದಕಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ.

ಆಂಜನೇಯ, ವೈಷ್ಣವ ದೇವಾಲಯ, ಶಾಸನ ಸ್ತಂಭಗಳು, ನೊಳಂಬ ಶೈಲಿಯ ಅತ್ಯಾಕರ್ಷಕ ವಾಸ್ತು ಶಿಲ್ಪಗಳು, 5-6 ಅಡಿ ಎತ್ತರದ ವಿಶೇಷ ಶಿವಲಿಂಗ ಮತ್ತು ಚಿತ್ರದುರ್ಗ ಪಾಳೇಗಾರರ ಕಾಲದ ಮಾರಮ್ಮ, ಕಾಳಮ್ಮ, ಈಶ್ವರ, ವೀರಭದ್ರ ದೇವಸ್ಥಾನ ಸೇರಿ ಅಳಿದುಳಿದ ಇತಿಹಾಸದ ಅವಶೇಷಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕ್ರಿ.ಶ 1689-1721ರಲ್ಲಿ ನಡೆದ ರೋಚಕ ಯುದ್ಧಗಳಲ್ಲಿ ‘ದೊಡ್ಡೇರಿ ಕದನ’ ಪ್ರಸಿದ್ಧವಾದುದು. ಚಿತ್ರದುರ್ಗದ ಪಾಳೇಗಾರರ ಪ್ರಸಿದ್ಧ ದೊರೆ ಬಿಚ್ಚುಗತ್ತಿ ಭರಮಣ್ಣ ನಾಯಕ ಮತ್ತು ಆತನ ಮಗ ಹಿರೇಮದಕರಿನಾಯಕ ಇಬ್ಬರೂ ದೊಡ್ಡೇರಿಯಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ್ದು ಇತಿಹಾಸ ಇದೆ. ಇಂತಹ ಕೋಟೆಗೆ ಕಾಯಕಲ್ಪ ಬೇಕಿದೆ..

Edited By : Nagesh Gaonkar
PublicNext

PublicNext

31/12/2024 04:34 pm

Cinque Terre

43.03 K

Cinque Terre

0

ಸಂಬಂಧಿತ ಸುದ್ದಿ