ಚಳ್ಳಕೆರೆ: ಚಳ್ಳಕೆರೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದೊಡ್ಡದಾದ ಬೇವಿನ ಮರವಿದ್ದು ಮರದ ಕೆಳಗೆ ಕಣಿವೆ ಮಾರಮ್ಮ ದೇವಸ್ಥಾನ ನಿರ್ಮಿಸಿ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ತಮ್ಮ ಅಭಿಲಾಷೆಗಳ ಕೋರಿಕೆ ಮಾಡುತ್ತಾ ಕಣಿವೆ ಮಾರಮ್ಮ ದೇವಿ ಮೊರೆ ಹೋಗುತ್ತಾರೆ.
ತಮ್ಮ ಇಷ್ಟಾರ್ಥ ಪೂರೈಸುತ್ತಾಳೆ ಎನ್ನುವ ಹಾಗಿದ್ರೆ ತಾಯಿ ಹೂವಿನ ರೂಪದಲ್ಲಿ ಅವರಿಗೆ ಸೂಚನೆ ನೀಡುತ್ತಾಳೆ. ನಂಬಿಕೆಯಿಂದ ಸಾಕಷ್ಟು ಭಕ್ತರು ಬರುತ್ತಿದ್ದು. ಇದೇ ಜಾಗದಲ್ಲಿ ಇರುವಂತಹ ಒಂದು ಕೋತಿ ಇಲ್ಲಿಗೆ ಬರುವ ಭಕ್ತರ ತಲೆ ಮೇಲೆ ಹತ್ತಿ ಕುಳಿತು ತನ್ನ ಕಪಿ ಚೇಷ್ಟೆ ಮಾಡಿ ಇಲ್ಲಿನ ಭಕ್ತರನ್ನ ಭಯಪಡಿಸುತ್ತಿದೆ..
PublicNext
31/12/2024 05:27 pm