ಹೊಸದುರ್ಗ: ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಶ್ರೀ ಮಠಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮಸ್ಥರು 32 ಕ್ವಿಂಟಲ್ ಅಕ್ಕಿಯನ್ನು ಸಮರ್ಪಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಪೂಜ್ಯರು ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವುದು ಸಂತೋಷ. ಪ್ರತಿಯೊಬ್ಬರು ದುರ್ವ್ಯಸನ ದುರಾಚಾರ ದೂರವಾಗಬೇಕು. ಪ್ರತಿಯೊಬ್ಬರು ಈ ಸಮಾಜದಿಂದ ಪಡೆದು ಈ ಸಮಯಕ್ಕೆ ಉಪಕಾರ ಆಗುವ ನಿಟ್ಟಿನಲ್ಲಿ ಕೊಡಿಗೆ ನೀಡಬೇಕು ಎಂದು ಶ್ರೀಗಳು ಅಶ್ರಿವಾಚನ ನೀಡಿದ್ದರು.
.
Kshetra Samachara
02/01/2025 02:01 pm