ಹಿರಿಯೂರು: 'ಶನಿ ಗ್ರಹವನ್ನು ತಪ್ಪು ದೃಷ್ಟಿಯಿಂದ ನೋಡುವುದು ತರವಲ್ಲ. ರಾಹು ಕೇತುಗಳು ಎಂಬ ಗ್ರಹಗಳೇ ಇಲ್ಲ. ಕೆಲವರು ಗ್ರಹ, ನಕ್ಷತ್ರಗಳನ್ನು ತಮ್ಮ ಜೀವನಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ಚಿತ್ರದುರ್ಗದ ಖಗೋಳ ವಿಜ್ಞಾನಿ ಎಚ್.ಎಸ್.ಟಿ. ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 'ಖಗೋಳ ಯಾನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಧೂಮಕೇತುಗಳು, ಗ್ರಹಣಗಳು ಅಪಶಕುನದ ಸಂಕೇತಗಳಲ್ಲ. ಇವುಗಳ ಪ್ರಭಾವಗಳು ಮನುಷ್ಯರ ಮೇಲೆ ಬೀರುವುದಿಲ್ಲ. ವಿದ್ಯಾವಂತರು ಕೂಡ ಇಂತಹ ಅಂಧ ನಂಬಿಕೆಗಳ ಬಲೆಗೆ ಬೀಳುತ್ತಿರುವುದು ವಿಪರ್ಯಾಸ. ವಿಜ್ಞಾನ ಸದಾ ಸತ್ಯವನ್ನು ಪ್ರತಿಪಾದಿಸುತ್ತದೆ. ಜನರು ಮೂಢನಂಬಿಕೆಗಳಿಂದ ಹೊರಬರಬೇಕು' ಎಂದು ಮನವಿ ಮಾಡಿದರು.
Kshetra Samachara
03/01/2025 09:39 am