ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 38ನೇ ವರ್ಷದ ಅಯ್ಯಪ್ಪ ಸ್ವಾಮಿ ಪಡಿಪೂಜೆ ಮಹೋತ್ಸವ ಕಾರ್ಯಕ್ರಮ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಗುರುಸ್ವಾಮಿಗಳಾದ ರಂಗಣ್ಣಸ್ವಾಮಿ ಹಾಗೂ ಕುಮ್ಮಿ ಸ್ವಾಮಿಗಳ ನೇತೃತ್ವದಲ್ಲಿ ಪಡಿಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾಳೆ ದಿಂಡಿನಿಂದ 18 ಮೆಟ್ಟಿಲುಗಳನ್ನು ನಿರ್ಮಿಸಿ 18 ಮೆಟ್ಟಿಲುಗಳ ಮೇಲೆ ಕರ್ಪೂರ ಹಚ್ಚಿ ಜನರ ಕಷ್ಟಗಳು ಕರ್ಪೂರದಂತೆ ಕರಗಲಿ ಎಂದು ಸ್ವಾಮಿಯಲ್ಲಿ ಬೇಡಿಕೊಳ್ಳಾಯಿತು. ಸ್ವಾಮಿ ಮಾಲಾದಾರಿಗಳು ಪಡಿ ಪೂಜೆಯಲ್ಲಿ ಭಾಗಿಯಾಗಿ ನಿರಂತರವಾಗಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ಅನ್ನಸತರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
PublicNext
02/01/2025 12:17 pm