ಹುಬ್ಬಳ್ಳಿ : ಗೋಕಾಕದಿಂದ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನನೊಂದ ಗಂಡ ಕಿಮ್ಸ್ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ನಡೆದಿದೆ.
ಗೋಕಾಕ ಮೂಲದ ರಾಧಿಕಾ ಎಂಬ 19 ವರ್ಷದ ಗರ್ಭಿಣಿಗೆ ಎಂಟು ತಿಂಗಳಾಗಿತ್ತು ಆದ್ರೆ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನೆಲೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು ಕೂಡಾ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ಆಕೆಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯ ವೈದ್ಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಿ ಅಂತಾ ಕಳುಹಿಸಿ ಕೊಟ್ಟಿದ್ದರು.
ಸೋಮವಾರ ಕಿಮ್ಸ್ ಆಸ್ಪತ್ರೆಗೆ ರಾಧಿಕಾಳನ್ನು ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾದಾಗ ರಾಧಿಕಾಳ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಧಿಕಾಳ ಸ್ಥಿತಿ ಗಂಭೀರವಾಗಿ ಮಂಗಳವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇತ್ತ ಹೆಂಡತಿ ಸಾವಿನ ಸುದ್ದಿ ತಿಳಿದು ಗಂಡ ಮಲ್ಲೇಶ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಸ್ಥಿತಿ ಗಂಭೀರವಾಗಿದ್ದು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಂದೆಡೆ ಸೊಸೆಯನ್ನು ಕಳೆದುಕೊಂಡ ನೋವು ಇನ್ನೊಂದೆಡೆ ಮಗ ಕೂಡಾ ಸಾವಿನ ಬಾಗಿಲಲ್ಲಿ ನಿಂತಿದ್ದು ಮಲ್ಲೇಶನ ತಾಯಿಗೆ ಬರಸಿಡಿಲು ಬಡದಂತಾಗಿದೆ. ಹೊಸ ವರ್ಷದಲ್ಲಿ ಮನೆಗೆ ಹೊಸ ಅಥಿತಿಯ ಆಗಮನ ಆಗುತ್ತೆ ಅಂತಾ ಕನಸ್ಸನ್ನು ಕಂಡಿದ್ದ ಕುಟುಂಬದ ಕನಸು ಕಮರಿ ಹೋಗಿದ್ದು ದುರಂತವೇ ಸರಿ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/12/2024 03:59 pm