ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ರೋಗಿ ರಾತ್ರೋರಾತ್ರಿ ನಾಪತ್ತೆ…! ಕಿಮ್ಸ್ ಸಿಬ್ಬಂದಿಯ ನಿರ್ಲಕ್ಷ್ಯ ಎಂದ ಸಂಬಂಧಿಕರು

ಹುಬ್ಬಳ್ಳಿ: ಆತ ಮೆದುಳು ಖಾಯಿಲೆಯಿಂದ ಬಳಲುತ್ತಿದ್ದ. ತನ್ನೂರಿನ ಆಸ್ಪತ್ರೆಯಲ್ಲಿ ತೋರಿಸಿದಾಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗು ಅಲ್ಲಿ ಟ್ರೀಟ್ಮೆಂಟ್ ಕೊಡ್ತಾರೆ ಅಂದಿದ್ದಾರೆ. ಹೀಗಾಗಿ ಆತನ ಕುಟುಂಬದವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಡಿಸೆಂಬರ್ 22 ರಂದು ಅಡ್ಮಿಟ್ ಮಾಡಿದ್ದರು. ಆದ್ರೆ ಬುಧವಾರ ತಡರಾತ್ರಿ ಅಡ್ಮಿಟ್ ಆಗಿದ್ದ ರೋಗಿ ಏಕಾಏಕಿ ನಾಪತ್ತೆಯಾಗಿದ್ದು ಆತನ ಕುಟುಂಬದವರು ಆತಂಕಕ್ಕೆ ಈಡಾಗಿದ್ದಾರೆ.

ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈತನ ಹೆಸರು ಯಲ್ಲಪ್ಪ ಇರೇಕಲ್ ಬಾಗಲಕೋಟೆಯ ನಿವಾಸಿ. ಈತ ಮೆದುಳು ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಯಲ್ಲಪ್ಪ ಬುಧವಾರ ರಾತ್ರಿ ಮೂರು ಗಂಟೆಗೆ ಕಿಮ್ಸ್ ಆಸ್ಪತ್ರೆಯಿಂದ ಬೆಡ್ ಶೀಟ್ ತಗೊಂಡು ನಾಪತ್ತೆಯಾಗಿದ್ದು, ಆತನ ಕುಟುಂಬದವರು ಇದೀಗ ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕೆ ಕಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತಾ ಯಲ್ಲಪ್ಪನ ಅಣ್ಣ ಹೇಳಿದ್ದಾನೆ.

ಈ ಬಗ್ಗೆ ಕಿಮ್ಸ್ ವೈದ್ಯರನ್ನು ಕೇಳಿದ್ರೆ ನಮ್ಮ ಗಮನಕ್ಕೆ ಈಗಾಗಲೇ ರೋಗಿ ನಾಪತ್ತೆಯಾದ ಮಾಹಿತಿ ಬಂದಿದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ವಿದ್ಯಾನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿ ಆತನನ್ನು ಹುಡುಕುವ ಕಾರ್ಯವನ್ನು ಮಾಡಲಾಗುವುದು.ಅಷ್ಟೇ ಅಲ್ಲದೇ ಕರ್ತವ್ಯ ಲೋಪ ಮಾಡಿದವರ ಮೇಲೆ ಕಟ್ಟು ನಿಟ್ಟಿನ ಕ್ರಮವನ್ನು ಜರುಗಿಸಲಾಗುವುದು ಅಂತಾರೇ ಕಿಮ್ಸ್ ವೈದ್ಯ ಗುರು ಪಾದಪ್ಪ.

ರಾತ್ರಿ ಬೆಡ್ ಶೀಟ್ ತಗೊಂಡು ಹೋಗಿರೋ ಯಲ್ಲಪ್ಪ ಎಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಆತನಿಗೆ ಏನಾದ್ರು ಆದ್ರೆ ಅದಕ್ಕೆ ನೇರವಾಗಿ ಕಿಮ್ಸ್ ಆಡಳಿತ ಮಂಡಳಿಯೇ ಕಾರಣ ಅಂತಾ ಯಲ್ಲಪ್ಪನ ಮನೆಯವರು ಅಂತಿದ್ದಾರೆ. ಒಟ್ಟಿನಲ್ಲಿ ನಾಪತ್ತೆಯಾಗಿರುವ ಯಲ್ಲಪ್ಪ ಸುರಕ್ಷಿತವಾಗಿ ಬಂದು ಕುಟುಂಬದವರನ್ನು ಸೇರಲಿ ಎಂಬುದೇ ನಮ್ಮ ಆಶಯವಾಗಿದೆ.

-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/01/2025 03:20 pm

Cinque Terre

88.34 K

Cinque Terre

4

ಸಂಬಂಧಿತ ಸುದ್ದಿ