ಹುಬ್ಬಳ್ಳಿ : ಸಿಲಿಂಡರ್ ಬ್ಲಾಸ್ಟ್ ಆಗಿ ಮೃತಪಟ್ಟ ಉಣಕಲ್ ಅಚ್ಚವ್ವನ ಕಾಲೋನಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಕಾರ್ಯವನ್ನು ದುರ್ಗಾ ಡೆವಲಪರ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ವಿರೇಶ ಉಂಡಿ ಮಾಡಿದ್ದಾರೆ.
ಹೌದು ! ಇತ್ತಿಚಿಗೆ ಡಿಸೆಂಬರ್ 23 ರಂದು ಉಣಕಲ್ ಈಶ್ವರ ದೇವಸ್ಥಾನದ ಪಕ್ಕದ ಕಟ್ಟಡ ಮೇಲ್ಮಾಳಿಗೆಯಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿ ನಿರ್ಮಿಸಿ ಅಲ್ಲೇ ವಾಸವಿದ್ದ 9 ಮಾಲಾಧಾರಿಗಳು ಸಿಲಿಂಡರ್'ನಿಂದ ಒಲೆಗೆ ಸಂಪರ್ಕಿಸಿದ ಪೈಪ್'ಗೆ ಓರ್ವ ಅಯ್ಯಪ್ಪಸ್ವಾಮಿ ಕಾಲು ತಾಗಿ ಸಿಲಿಂಡರ್ ಅನಿಲ ಸೋರಿಕೆಯಾಗಿ ದೀಪದ ಬೆಂಕಿ ತಾಗಿ ಸ್ಫೋಟಗೊಂಡು ಮಾಲಾಧಾರಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸಿದೆ 8 ಜನ ಅಸುನೀಗಿದ್ದರು.
ಇದೀಗ ಮೃತರ ಕುಟುಂಬಕ್ಕೆ ತಲಾ 25 ಸಾವಿರ ರೂಪಾಯಿಯನ್ನು ದುರ್ಗಾ ಡೆವಲಪರ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ವಿರೇಶ ಉಂಡಿ ನೀಡಿದ್ದಾರೆ.
ಅದರಂತೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮೃತರ ಮಕ್ಕಳಿಗೆ ಪದವಿವರೆಗೂ ವಿದ್ಯಾಭ್ಯಾಸದ ಖರ್ಚನ್ನೂ ತಾವೇ ನೀಡುವ ಜವಾಬ್ದಾರಿ ವಹಿಸಿಕೊಂಡರು.
ಘಟನೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಈಗಾಗಲೇ ಸಚಿವ ಸಂತೋಷ್ ಲಾಡ್ 5 ಲಕ್ಷ ರೂಪಾಯಿ ಮೃತರ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ ಎಂದರು.
ಮೃತ ಅಯ್ಯಪ್ಪಸ್ವಾಮಿ ಕುಟುಂಬಸ್ಥರು ಆರ್ಥಿಕ ಸಹಾಯ ಸ್ವೀಕರಿಸಿ, ಕಣ್ಣೀರಾದರು. ಈ ಸಂದರ್ಭದಲ್ಲಿ ಅಚ್ಚವ್ವನ ಕಾಲೋನಿ ಮುಖಂಡರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2025 10:14 pm