ಬೇಲೂರು : ಕಾಡಾನೆಗಳ ಹಿಂಡು ಸುಮಾರ 60 ಕ್ವಿಂಟಾಲ್ ಭತ್ತವನ್ನು ತಿಂದು ಹಾಕಿದ ಘಟನೆ ತಾಲೂಕಿನ ಕಣ್ಣೀರಿ ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ದ್ಯಾವಲಾಪುರದ ಸುಮಾರು 8 ಜನ ರೈತರು ತಾವು ಬೆಳೆದ ಭತ್ತವನ್ನು ಗುರುವಾರ ಕಟಾವು ಮಾಡಿ ಭತ್ತದ ಯಂತ್ರದಲ್ಲಿ ಒಕ್ಕಣೆ ಮಾಡಿ ಚೀಲಗಳಲ್ಲಿ ಶೇಕರಿಸಿಟ್ಟಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಟ್ರಾಕ್ಟರ್ ನಲ್ಲಿ ಕಟಾವು ಮಾಡಿದ ಭತ್ತವನ್ನು ತುಂಬಲು ಬಂದ ರೈತರಿಗೆ, ದಿಗ್ರವೆ ಕಾದಿತ್ತು.ಸುಮಾರು 12 ಕಾಡಾನೆಗಳ ಹಿಂಡೊಂದು ಸಂಪೂರ್ಣ ಭತ್ತವನ್ನು ತಿಂದು ಹಾಳು ಮಾಡಿರುವುದಲ್ಲದೆ ಚೀಲದಲ್ಲಿದ್ದ ಸಂಪೂರ್ಣ ಭತ್ತವನ್ನು ಚೆಲ್ಲಾಪಿಲ್ಲಿ ಮಾಡಿದೆ.
ಗ್ರಾಮದ ಹೂವೇಗೌಡ,ಹಾಲೇಗೌಡ,ಹಿರಿಗೌಡ,ರಮೇಶ್ ಸೇರಿದ ಸುಮಾರು 60 ಕ್ವಿಂಟಾಲ್ ಭತ್ತವನ್ನು ನಾಶಮಾಡಿದೆ.ಈಗಾಗಲೇ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಷ್ಟಪಟ್ಟು ಮಾಡಿದ ಬೆಳೆ ನಾಶವಾಗುತ್ತಿದೆ.
ಇವುಗಳ ಹಾವಳಿಯಿಂದ ಬೇಸತ್ತು ನಾವುಗಳು ಏನೂ ಮಾಡದ ಪರಿಸ್ಥಿತಿ ಆಗಿದೆ.ಸುಮಾರು 3 ಲಕ್ಷ ಬೆಲೆ ಬಾಳುವ ರೈತರು ತಾವು ಬೆಳೆದಂತ ಭತ್ತ ತಿಂದು ಚೆಲ್ಲಾಪಿಲ್ಲಿ ಮಾಡಿದೆ.ಇದರಿಂದ ನಾವು ಬದುಕುವುದಾದರೂ ಹೇಗೆ ಅರಣ್ಯ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡಿದ್ದು ಕ್ರಮಕೈಗೊಳ್ಳಿ ಎಂದರೆ ಕೇವಲ ನಮ್ಮ ಕಣ್ಣೂರೆಸುವ ತಂತ್ರ ಮಾಡುತ್ತಿದ್ದಾರೆ ಕೂಡಲೇ ನಮಗೆ ಪರಿಹಾರ ನೀಡಬೇಕು ಇಲ್ಲಿರುವ ಆನೆಗಳನ್ನು ಇಲ್ಲಿಂದ ಓಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
PublicNext
28/12/2024 02:36 pm