ಸಕಲೇಶಪುರ : ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ, ಆಜಾದ್ ರಸ್ತೆಯಲ್ಲಿ ಅಪರೂಪದ ಅಟ್ಲಾಸ್ ಪತಂಗ ಪ್ರತ್ಯಕ್ಷವಾಗಿದೆ. ಬದ್ರಿಯಾ ಜುಮಾ ಮಸ್ಜಿದ್ ಆವರಣದಲ್ಲಿ ಜನರ ಕಣ್ಣಿಗೆ ಬಿದ್ದಿದೆ,ದಟ್ಟ ಅರಣ್ಯದಲ್ಲಿ ಕಾಣ ಸಿಗುವ ಅಪರೂಪದ ಅಟ್ಲಾಸ್ ಪತಂಗ ಇದಾಗಿದ್ದು,ಅಪರೂಪದ ಪತಂಗ ಕಂಡು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಶ್ಚಿಮಘಟ್ಟ ಅರಣ್ಯದಲ್ಲಿ ಕಂಡು ಬರುವ ಚಿಟ್ಟೆಗಿಂತ ಗಾತ್ರದಲ್ಲಿ ದೊಡ್ಡದಾದ ಅಪರೂಪದ ಈ ಪತಂಗ ದಟ್ಟ ಅರಣ್ಯದಲ್ಲೇ ವಾಸವಿರುತ್ತದೆ. ನೋಡಲು ಎರಡು ತಲೆ ಹಾವಿನಂತೆ ಕಾಣುವ ಇದು ,ಸೂಕ್ಷ್ಮ ಪ್ರಭೇದದ ಕೀಟವಾಗಿದೆ,ಅರಣ್ಯ ಬಿಟ್ಟು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
PublicNext
28/12/2024 01:03 pm