ಬೇಲೂರು : ತಾಲೂಕಿನ ಬಿಕ್ಕೋಡು ಹೋಬಳಿಯ ಬಕರವಲ್ಲಿ ಗ್ರಾಮಕ್ಕೆ ಹಾಡುಹಗಲೇ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿವೆ.
ಮರಿ ಆನೆಗಳ ಜೊತೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿದ್ದು ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಳಿಕ ಪಕ್ಕದ ತೋಟದ ಕಡೆ ಸಾಗಿದ ಕಾಡಾನೆಗಳ ಗುಂಪಿನ ವೀಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈಗಾಗಲೇ ಬೇಲೂರು, ಆಲೂರು ಸಕಲೇಶಪುರ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಾಡನೆಗಳಿಗೆ ಶಾಶ್ವತ ಪರಿಹಾರಕ್ಕೆ ಅನೇಕ ಹೋರಾಟಗಳು ನಡೆದರು ಈ ವರೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿಲ್ಲ, ಕಾಡಿನಲ್ಲಿ ಇದ್ದ ಕಾಡಾನೆಗಳು ಆಹಾರ ಅರಸಿ ಇದೀಗ ಗ್ರಾಮಗಳಿಗೆ ಬರಲು ಆರಂಭಿಸಿದ್ದು ಇದರಿಂದ ಗ್ರಾಮೀಣ ಪ್ರದೇಶದ ಜನರ ಗೋಳು ಹೇಳತೀರದಾಗಿದೆ.
PublicNext
30/12/2024 03:08 pm