ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಸೀಕೆರೆ: ದಾನ ಕೇಳುವ ನೆಪದಲ್ಲಿ ಬಂದ ನಕಲಿ ಸ್ವಾಮೀಜಿಗಳಿಗೆ ಗ್ರಾಮಸ್ಥರಿಂದ ಗೂಸಾ

ಅರಸೀಕೆರೆ: ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ದಾನ ಕೋರುವ ನೆಪದಲ್ಲಿ ಒಂಟಿ ಮನೆಯೊಂದಕ್ಕೆ ನುಗ್ಗಿದ್ದ ನಕಲಿ ಸ್ವಾಮೀಜಿಗಳಿಬ್ಬರು ಹಾಗೂ ಮೂವರು ಸಹಚರರನ್ನು ತಾಲೂಕಿನ ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮಸ್ಥರು ಹಿಡಿದು ಬಾಣಾವರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮಕ್ಕೆ ಕಾವಿಧಾರಿಯಾಗಿ ಬಂದಿದ್ದು ಐವರು ತೋಟದಲ್ಲಿರುವ ದಾನಶೇಖರಪ್ಪ ಅವರ ಒಂಟಿ ಮನೆಗೆ ದಿಢೀ‌ರ್ ನುಗ್ಗಿ ನಾವು ಜೇನುಕಲ್ ಸಿದ್ದೇಶ್ವರ ಸ್ವಾಮಿ ಮಠದವರಾಗಿದ್ದು ಹೆಚ್ಚಿನ ಸಹಾಯ ಮಾಡಬೇಕು. ಇದರಿಂದ ಮಠದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಅವರ ನಡವಳಿಕೆ ಅನುಮಾನ ಹುಟ್ಟು ಹಾಕಿದೆ. ತಕ್ಷಣವೇ ಎಚ್ಚೆತ್ತ ಮನೆಯ ಮಹಿಳೆ ಫೋನ್ ಮೂಲಕ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ನಕಲಿ ಕಾವಿಧಾರಿಗಳು ಪರಾರಿಯಾಗಲು ಯತ್ನಿಸಿ ಕಾರು ಸಹಿತ ಸಿಕ್ಕಿಬಿದ್ದಿದ್ದು ಗೂಸಾ ತಿಂದಿದ್ದಾರೆ.

ಲಕ್ಷಾಂತರ ನಗದು ಸಹಿತ ಐವರನ್ನು ಬಾಣಾವರ ಠಾಣೆಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ಬಂದಿದ್ದವರು ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದವರು ಎಂದು ಗೊತ್ತಾಗಿದ್ದು ಪ್ಯಾಂಟ್, ಅಂಗಿ ಬದಲಿಸಿ ಕಾವಿ ಧರಿಸಿ ಭಿಕ್ಷೆ ನೆಪದಲ್ಲಿ ಮನೆಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಿದ್ದ ಬಾಣಾವರ ಠಾಣೆ ಪೊಲೀಸರು ಐವರನ್ನು ಬಿಟ್ಟು ಕಳುಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ ನ.3ರಂದು ಅಪರಿಚಿತರು ಕಲ್ಲುಂಡಿ ಗ್ರಾಮದಲ್ಲಿ ಭಿಕ್ಷೆ ಕೇಳುವ ವೇಳೆ ಮನೆಯವರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಇದೀಗ ನಗದು ಸಹಿತ ಆರೋಪಿಗಳು ಸಿಕ್ಕಿ ಬಿದ್ದರೂ ಕ್ರಮ ಜರುಗಿಸದ ಪೊಲೀಸರ ನಡೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Ashok M
PublicNext

PublicNext

06/01/2025 07:45 pm

Cinque Terre

30.23 K

Cinque Terre

0