ಹಾಸನ: ನಗರದ ಜಿಲ್ಲಾ ಪತ್ರಕರ್ತರದ ಭವನದ ಎದುರಿನ ಡಿಡಿಪಿಐ ಕಚೇರಿಯ ಸೂಪರಿಂಟೆಂಡೆಂಟ್ ವೇಣು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪ ನೇತೃತ್ವದ ಅಧಿಕಾರಿಗಳ ಕೈಗೆ ಸೂಪರಿಂಟೆಂಡೆಂಟ್ ವೇಣು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಯಾರಿಂದ ಯಾವ ಕಾರಣಕ್ಕೆ ಲಂಚ ಪಡೆಯಲಾಗುತ್ತಿತ್ತು, ಯಾವ ಉದ್ದೇಶಕ್ಕೆ ಎಂಬುದು ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಿಳಿಯಬೇಕಿದೆ. ಸದ್ಯಕ್ಕೆ ವಿಚಾರಣೆ ಪ್ರಕ್ರಿಯೆ ಮುಂದುವರಿದಿದೆ.
PublicNext
04/01/2025 05:02 pm