ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಪ್ರಿಯಕರನಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್..!

ಹಾಸನ : ಪ್ರಿಯಕರನಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ,ಹೊಸ ವರ್ಷದ ತಡ ರಾತ್ರಿ ನಡೆದ ದುರ್ಘಟನೆ ಆರೋಪಿ ಭವಾನಿ ಸಾಮಾಜಿಕ ಜಾಲತಾಣದ ಮೆಸೇಜ್ ವೈರಲ್

ಮನುಕುಮಾರ್‌ಗೂ ನನಗೂ ಮದುವೆ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ನೋಂದಣಿ ಮಾಡಿಸಿಕೊಂಡಿದ್ದೇವೆ ಎಂದು ಮದುವೆ ನೋಂದಣಿ ಪ್ರಮಾಣಪತ್ರವೊಂದನ್ನು ಭವಾನಿ ಪೊಲೀಸರಿಗೆ ತಿಳಿಸಿದ್ದು, 2023ರ ನ.10 ರಂದು ಅವರಿಬ್ಬರ ಮದುವೆ ನೋಂದಣಿ ಆಗಿರುವ ಮಾಹಿತಿ ಅದರಲ್ಲಿದೆ.

ಆತ ನನ್ನೊಂದಿಗೆ ಮದುವೆ ಆಗಿ ತುಂಬಾ ಜನರ ಜೊತೆ ಅಫೇ‌ರ್ ಇಟ್ಟುಕೊಂಡಿದ್ದ. ಹೊಸ ವರ್ಷದ ಪಾರ್ಟಿಗೂ ಬೇರೆ ಹುಡುಗಿ ಕರೆದುಕೊಂಡು ಹೋಗಿದ್ದ. ಅದು ಗೊತ್ತಾಗಿಯೇ ನಾನು ಅಲ್ಲಿಗೆ ಹೋಗಿ ಜಗಳ ಮಾಡಿದೆ. ಈ ವಿಚಾರದಲ್ಲಿ ಅವರ ಮನೆಯ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿರುವ ಭವಾನಿ ಕಳುಹಿಸಿರುವ ಇನ್ಸ್ತಗ್ರಮ್ ಮೆಸೇಜ್ ಗಳ ಸ್ಟ್ರೀನ್ ಶಾಟ್ ವೈರಲ್ ಆಗಿದೆ.,

ಪ್ರೀತಿ ನಿರಾಕರಿಸಿದ ಎಂದು ಪ್ರಿಯಕರಿಗೆ ಚಾಕು ಇರಿದು ಎಸ್ಕೆಪ್ ಆಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿ.31 ರ ರಾತ್ರಿ ನಗರದ ಖಾಸಗಿ ಹೋಟೆಲ್ ಗೆ ಪ್ರವೇಶಿಸಿದ್ದ ಎ.ಗುಡುಗನಹಳ್ಳಿಯ ಭವಾನಿ ಬಹುಕಾಲದ ಗೆಳೆಯ ಮನುಕುಮಾ‌ರ್ ಮೇಲೆ ಹ ..ಲ್ಲೆ ನಡೆಸಿ ನಾಪತ್ತೆಯಾಗಿದ್ದಳು. ಗಭೀರ ಗಾಯಗೊಂಡಿದ್ದ ಮನುಕುಮಾರ್ ಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು ಹಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನುಕುಮಾ‌ರ್ ಹಾಗು ನನ್ನ ಮದುವೆ 2023ರಲ್ಲೇ ಆಗಿದೆ ಎಂದು ಹೇಳಿರುವ ಭವಾನಿ ಪೊಲೀಸರಿಗೆ ರಿಜಿಸ್ಟ್ರಾ‌ರ್ ದಾಖಲೆಗಳನ್ನು ತೋರಿಸಿದ್ದಾಳೆ ಎನ್ನಲಾಗಿದೆ. ಯಾರಿಗೂ ತಿಳಿಯದಂತೆ ಇಬ್ಬರು ಮದುವೆಯಾಗಿದ್ದು ಇತ್ತೀಚಿಗೆ ಮನುಕುಮಾ‌ರ್ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.

Edited By : Shivu K
PublicNext

PublicNext

04/01/2025 03:26 pm

Cinque Terre

21.72 K

Cinque Terre

0