ಹಾಸನ: ಪ್ರಿಯತಮೆಯಿಂದ ಪ್ರಿಯಕರಿನಿಗೆ ಚಾಕು ಇರಿದಿರುವ ಘಟನೆ ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ನಡೆದಿದೆ.
ಮನುಕುಮಾರ್ (25) ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೇಟ್‌ನಲ್ಲಿ ತಡರಾತ್ರಿ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮನುಕುಮಾರ್ ಹಾಗೂ ಭವಾನಿ ಕೆಲ ದಿನಗಳಿಂದ ದೂರವಾಗಿದ್ದರು.
ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಮನುಕುಮಾರ್ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಬಂದಿದ್ದ. ಪದೇ ಪದೇ ಮನುಕುಮಾರ್‌ಗೆ ಭವಾನಿ ಫೋನ್ ಮಾಡುತ್ತಿದ್ದಳು. ತಡರಾತ್ರಿ 12.30ಕ್ಕೆ ಹೋಟೆಲ್ ಬಳಿ ಬಂದ ಭವಾನಿ ಹೋಟೆಲ್ ಗೇಟ್ ಒಳಗೆ ಹೋಗಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಹಾಗೂ ಭವಾನಿ ನಡುವೆ ಜಗಳ ಶುರುವಾಗಿದೆ.
ಈ ವೇಳೆ ಭವಾನಿ ಏಕಾಏಕಿ ಮನುಕುಮಾರ್‌ಗೆ ಚಾಕುವಿನಿಂದ ಇರಿದಿದ್ದಾಳೆ. ಚಾಕು ಇರಿತಕ್ಕೊಳಕಾಗದ ಮನುಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಾಸನದ ಕೆಆರ್ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
01/01/2025 01:36 pm