ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭತ್ತ ಕುಯ್ಲು ಮಾಡುವಾಗಲೇ ದುತ್ತನೆ ಪ್ರತ್ಯಕ್ಷವಾದ ದೈತ್ಯಾಕಾರದ ಒಂಟಿ ಸಲಗ

ಬೇಲೂರು : ಭತ್ತ ಕುಯ್ಲು ಮಾಡುವಾಗಲೇ ಕಾಡಾನೆ ಎಂಟ್ರಿ ಕೊಟ್ಟಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಡಾನೆಯನ್ನು ಕಂಡು ಭತ್ತ ಕುಯ್ಲು ಮಾಡುತ್ತಿದ್ದ ರೈತರು ಕುಯ್ಲು ಮಾಡುವುದನ್ನು ಬಿಟ್ಟು ಓಡಿ ಹೋಗಿದ್ದಾರೆ.

ಅರೆಹಳ್ಳಿ ಗ್ರಾಮದಲ್ಲಿ ರೈತರು ಭಕ್ತ ಕುಯ್ಲು ಮಾಡುತ್ತಿದ್ದ ವೇಳೆ ಕಾಫಿ ತೋಟದಿಂದ ಒಂಟಿ ಸಲಗ ಒಂದು ದಿಢೀರ್ ಪ್ರತ್ಯಕ್ಷವಾಗಿದೆ.

ಕಾಡಾನೆ ನೋಡುತ್ತಿದ್ದಂತೆ ರೈತರು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ಭತ್ತ ತಿನ್ನುತ್ತ ಗದ್ದೆಯಲ್ಲಿ ನಿಂತಿರುವ ದೈತ್ಯಾಕಾರದ ಒಂಟಿ ಸಲಗ ನೋಡಿ ಸ್ಥಳೀರು ಭಯಭೀತರಾಗಿದ್ದಾರೆ, ಸ್ಥಳಕ್ಕೆ ಅರಣ್ಯ ಇಲಾಖೆಯ ಇ ಟಿ ಎಫ್ ಸಿಬ್ಬಂದಿ ಭೇಟಿ ನೀಡಿ ಆನೆಯನ್ನು ಅಲ್ಲಿಂದ ಓಡಿಸಲು ಯಶಸ್ವಿಯಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

31/12/2024 07:17 pm

Cinque Terre

443.1 K

Cinque Terre

0