ಬೇಲೂರು : ಬೆಳ್ಳಂಬೆಳಿಗ್ಗೆ ರಸ್ತೆಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿರುವ ಘಟನೆ ಬೇಲೂರು ತಾಲೂಕಿನ ಮಲ್ಲಾಪುರ-ಮೊವ್ವಲ ರಸ್ತೆಯಲ್ಲಿ ನಡೆದಿದೆ. ಕಾಡಾನೆಗಳನ್ನು ಕಂಡು ಭಯಭೀತರಾದ ವಾಹನ ಸವಾರರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಕಾಡಾನೆಗಳು ಹೋಗುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ರಸ್ತೆಯಲ್ಲಿ ನಿಧಾನವಾಗಿ ನಡೆಯುತ್ತಾ ಪಕ್ಕದಲ್ಲಿಯೇ ಇದ್ದ ಕಾಫಿ ತೋಟಕ್ಕೆ ಹೋಗಿವೆ.ಬೇಲೂರು ಭಾಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಇಲ್ಲಿನ ಸ್ಥಳೀಯರು ನಿತ್ಯವೂ ಕೂಡ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ.
ಕಾಡಾನೆಗಳ ಉಪಟಳದಿಂದ ಹೈರಾಣಾಗಿರುವ ಸ್ಥಳೀಯರು ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
Kshetra Samachara
04/01/2025 11:48 am