ಹಾಸನ: ತಮ್ಮ ಮೇಲಿನ ಎಂಎಲ್‌ಸಿ ಸೂರಜ್ ರೇವಣ್ಣ ಆರೋಪಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಶ್ರೇಯಸ್ ಪಟೇಲ್, ಉದ್ಭವಮೂರ್ತಿ ತರಹ ಎದ್ದು ಬಂದಿರುವ ಅವರು ಬಾಲಿಷವಾಗಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್ ಅವರದ್ದು ಬಾಲಿಷವಾದ ಹೇಳಿಕೆ, ಅದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡ್ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ರೀತಿ ಮಾತನಾಡಿದ್ದಾರೆ.
ವಾಗ್ಮಿ, ದೊಡ್ಡ ಮೇಧಾವಿ ತರಹ ಮಾತನಾಡಿದ್ದಾರೆ. ಆದರೆ ಅವರಿನ್ನೂ ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿ.ಪಂ. ಸದಸ್ಯನಾಗಿದ್ದೇನೆ, ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಬಂದು ಎಂಎಲ್‌ಸಿ ಆಗಿರುವವರು ಅವರು ಎಂದು ಕಿಡಿಕಾರಿದರು.
ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ? ಅವರ ಹೇಳಿಕೆಯಿಂದ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು- ಅವರು ಎದುರಾಳಿ. ಯಾವುದೇ ವಿಚಾರದಲ್ಲೂ ನಾನು ಬಗ್ಗುವವನಲ್ಲ ಎಂದರು.
PublicNext
03/01/2025 04:36 pm