ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಭಾರತ' ವಿಶ್ವದೆದುರು ಬಲಾಡ್ಯ ಆರ್ಥಿಕ ಶಕ್ತಿಯಾಗಿ ನಿಲ್ಲಲು 'ಸಿಂಗ್‌' ಕಾರಣ!

ಅಥಣಿ : ಆಧುನಿಕ ಭಾರತದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೆ ಏರಿಸಿದ್ದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (92) ಗುರುವಾರ ರಾತ್ರಿ ನಿಧನರಾದರು. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್‌ ಅವರಿಗೆ ಗುರುವಾರ ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿ, ಪ್ರಜ್ಞೆ ಕಳೆದುಕೊಂಡಿದ್ದರು.

ಈ ಹಿನ್ನೆಲೆ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೇ ರಾತ್ರಿ 9.50ರ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಸಿಂಗ್‌, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ನಡೆದು ಬಂದ ದಾರಿಯ ಬಗ್ಗೆ ಸಾಹಿತಿ ಡಾ :ದೊಡ್ಡನಿಂಗಪ್ಪಗೋಳ ಹೇಳೋದು ಹೀಗೆ....

ಡಾ. ಮನಮೋಹನ್ ಸಿಂಗ್, ಸೆಪ್ಟೆಂಬರ್ 26, 1932 ಈಗಿನ ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್‌ನ ಗಾನ್‌ನಲ್ಲಿ ಜನಿಸಿದರು. ಒಂದು ಸಣ್ಣ ಹಳ್ಳಿಯಿಂದ ಬಂದು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿ ಹಾಗೂ ಪ್ರಧಾನಿಯಾಗಿ ಅಳಿಸಲಾಗದ ಛಾಪು ಮೂಡಿಸಿದವರು ಡಾ 2 .2004 80 2014 ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೇತೃತ್ವ ವಹಿಸಿ, ಭಾರತ ವಿಶ್ವದೆದುರು ಬಲಾಡ್ಯ ಆರ್ಥಿಕ ಶಕ್ತಿಯಾಗಿ ನಿಲ್ಲಲು ಕಾರಣರಾದವರು.

ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಸಿಖ್ ವ್ಯಕ್ತಿಯಾಗಿ ಡಾ. ಸಿಂಗ್ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಾಯಕತ್ವವು ಗಮನಾರ್ಹವಾದ ಆರ್ಥಿಕ ಪರಿವರ್ತನೆ ಮಾಡಿದ್ದಲ್ಲದೇ, ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಿಯಾಗಿದ್ದ ಅವಧಿಯಲ್ಲಿ ಹಲವಾರು ಮಹತ್ವದ ಸುಧಾರಣೆಗಳು ಮತ್ತು ಉಪಕ್ರಮಗಳಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಕಂಡಿದೆ.

ಸಿಂಗ್ ಸರ್ಕಾರವು ನಾಗರಿಕರಿಗೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿ ಹಕ್ಕುಗಳನ್ನು ಖಾತರಿಪಡಿಸುವ ಐತಿಹಾಸಿಕ ಶಾಸನಗಳನ್ನು ಅಂಗೀಕರಿಸುವ ಮೂಲಕ ಭವ್ಯ ಭಾರತಕ್ಕೆ ಭದ್ರ ಅಡಿಪಾಯ ಹಾಕಿತು. ಈ ಮೂಲಕ ಅವರ ನಾಯಕತ್ವವು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಆಟಗಾರನಾಗಿ ಭಾರತದ ಪಾತ್ರವನ್ನು ಗಟ್ಟಿಗೊಳಿಸಿತು, ಸುಧಾರಣೆಗಳೊಂದಿಗೆ ದೇಶವು ತ್ವರಿತ ಬೆಳವಣಿಗೆಯ ಹಂತವನ್ನು ತಲುಪಲು ರಾಜಮಾರ್ಗ ನಿರ್ಮಾಣ ಮಾಡಿದರು.

ಸಿಂಗ್ ಅವರು ಆರ್ಥಿಕ ನೀತಿ ನಿರೂಪಣೆಗಾಗಿ ನೀಡಿದ ಕೊಡುಗೆಗಳನ್ನು ಗುರುತಿಸಿ 1987 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿಲಾಗಿದೆ.

Edited By : Vinayak Patil
PublicNext

PublicNext

27/12/2024 04:15 pm

Cinque Terre

35.71 K

Cinque Terre

0

ಸಂಬಂಧಿತ ಸುದ್ದಿ