ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ

ಬೆಳಗಾವಿ: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಈಗಾಗಲೇ ನಗರಕ್ಕೆ ಬಂದಿರುವ ಎಲ್ಲ ನಾಯಕರು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಅದೇ ವೇದಿಕೆಯಲ್ಲಿ ಮನಮೋಹನ ಸಿಂಗ್‌ ಅವರಿಗೆ ಗೌರವ ವಂದನೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘1924ರ ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂಬ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದನ್ನು ಸದ್ಯಕ್ಕೆ ಮುಂದೂಡುತ್ತೇವೆ. ಮುಂದಿನ ಕ್ರಮ ಏನು ಮಾಡಬೇಕು ಎಂದು ವರಿಷ್ಠರೊಂದಿಗೆ ಚರ್ಚಿಸಿ ತಿಳಿಸುತ್ತೇನೆ’ ಎಂದರು.

‘ಮನರೇಗಾ’ದಂತಹ ಯೋಜನೆ ಆರಂಭಿಸುವ ಮೂಲಕ ಮನಮೋಹನ್ ಸಿಂಗ್ ಅವರು ಇಡೀ ದೇಶದ ಬಡವರಿಗೆ ಕೆಲಸ ಕೊಟ್ಟು, ಸಬಲರನ್ನಾಗಿ ಮಾಡಿದರು. ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮುಂತಾದ ಅವರ ನೀತಿಗಳು ದೇಶದ ಗತಿಯನ್ನೇ ಬದಲಿಸಿದವು. ರೈತರ ಸಾಲ ಮನ್ನಾ ಮಾಡುವ ಮೂಲಕ ಅವರೊಬ್ಬ ದೊಡ್ಡ ಆರ್ಥಿಕ ತಜ್ಞ ಎಂಬುದನ್ನು ಜಗತ್ತಿಗೆ ತೋರಿಸಿದ್ದರು. ಇಡೀ ಪ್ರಪಂಚದ ರಾಷ್ಟ್ರಗಳು ಆರ್ಥಿಕವಾಗಿ ಜರ್ಜರಿತವಾದಾಗ ಭಾರತ ಮಾತ್ರ ಪ್ರಬಲವಾಗಿ ನಿಂತಿದ್ದು ಮನಮೋಹನ್ ಸಿಂಗ್ ಅವರ ಕೃರ್ತೃತ್ವ ಶಕ್ತಿಯ ಪ್ರತೀಕ’ ಎಂದರು.

‘ಜವಾಹರಲಾಲ್‌ ನೆಹರೂ ಅವರ ಹೆಸರಿನಲ್ಲಿ ‘ನರ್ಮ್’ ಯೋಜನೆ ಆರಂಭಿಸಿ ದೇಶದಲ್ಲಿ ಫ್ಲೈವೋವರ್‌ಗಳ ಕಲ್ಪನೆ ಸಾಕಾರ ಮಾಡಿದರು. ಅವರ ಕಾರಣಕ್ಕಾಗಿಯೇ ಇಂದು ಬೆಂಗಳೂರು ಇಷ್ಟೊಂದು ಅಭಿವೃದ್ಧಿ ಆಗಿದೆ ಎಂದು ಸ್ಮರಿಸಿದರು.

‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ನಮ್ಮ ನಾಯಕರು ಬಂದಿದ್ದಾರೆ. ಅವರನ್ನು ಯಾರೂ ಮಧ್ಯದಲ್ಲೇ ಕೈ ಬಿಡುವಂತಿಲ್ಲ. ಯಾರಿಗೆ ಏನೇನು ಜವಾಬ್ದಾರಿ ವಹಿಸಲಾಗಿದೆಯೋ ಅದೆಲ್ಲವನ್ನೂ ಚಾಚೂತಪ್ಪದೇ ನಿಭಾಯಿಸಬೇಕು. ನಾಯಕರು ಸುರಕ್ಷಿತವಾಗಿ ಅವರ ಊರು ಸೇರುವವರೆಗೂ ನಮ್ಮ ಮುಖಂಡರು ಜವಾಬ್ದಾರಿ ನಿಭಾಯಿಸಬೇಕು’ ಎಂದು ಡಿ.ಕೆ.ಶಿವಕುಮಾರ್‌ ಸೂಚಿಸಿದರು.

ಶುಕ್ರವಾರ (ಡಿಸೆಂಬರ್‌ 27) ಸಂಜೆ 5ಕ್ಕೆ ದೆಹಲಿಗೆ ವಿಮಾನವಿದೆ. ಅದನ್ನು ಇನ್ನಷ್ಟು ಬೇಗ ಹಾರಿಸಲು ದೆಹಲಿ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಯಾರನ್ನು ಕರೆದೊಯ್ಯಲು ಸಾಧ್ಯವೋ ಎಲ್ಲರನ್ನೂ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ’ ಎಂದೂ ಅವರು ವಿವರಿಸಿದರು.

Edited By : Somashekar
PublicNext

PublicNext

27/12/2024 11:15 am

Cinque Terre

25.02 K

Cinque Terre

1

ಸಂಬಂಧಿತ ಸುದ್ದಿ