ಬೆಳಗಾವಿ: ಡಾ. ಮನಮೋಹನ್ ಸಿಂಗ್ ಅವರು ಈ ದೇಶವನ್ನು ಮಹಾನ್ ಚೇತನವನ್ನಾಗಿ ಬದಲಾಯಿಸಿದವರು. ಆರ್ಥಿಕ ಕ್ಷೇತ್ರದಲ್ಲಿ ಬಹಳಷ್ಟು ಜ್ಞಾನವನ್ನು ಹೊಂದಿದ್ರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ. ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಅವರ ಆರೋಗ್ಯ ಸರಿಯಿರಲಿಲ್ಲ. ಅವರ ಅನುಭವ ಆರ್ಥಿಕ ಸುಧಾರಣೆಗಾಗಿ ಸಹಕಾರಿಯಾಗಿತ್ತು.
ಅವರ ಆರ್ಥಿಕ ನೀತಿಯಿಂದಾಗಿ ದೇಶದ ದಿಕ್ಕನ್ನೇ ಬದಲಿಸಿದ್ರು. ಆಧುನಿಕ ಭಾರತವನ್ನು ಕಟ್ಟಲು ಅವರ ಕೊಡುಗೆ ಬಹಳಷ್ಟಿದೆ. ಆಹಾರ ಹಕ್ಕಿನ ಕಾಯ್ದೆ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಯಾರ ಮೇಲೆಯೂ ದ್ವೇಷದ ರಾಜಕಾರಣ ಮಾಡಲಿಲ್ಲ. ದೇಶದ ಪ್ರಜಾಪ್ರಭುತ್ವ ಎತ್ತಿ ಹಿಡಿದ ರಾಜಕಾರಣಿಯಾಗಿದ್ರು. ಅತ್ಯಂತ ಸಂಭಾವಿತ, ಸರಳ ಸಜ್ಜನಿಕೆಯ ರಾಜಕಾರಣಿ. ಇತಿಹಾಸ ನೋಡಿದಾಗ ಮನಮೋಹನ್ ಸಿಂಗ್ ಓರ್ವ ಮೇಧಾವಿ ಪ್ರಧಾನಿಯಾಗಿ ನಿಲ್ತಾರೆ ಎಂದು ಹೇಳಿದರು.
PublicNext
27/12/2024 12:51 pm