ಬೆಳಗಾವಿ: ಕೆಎಲ್ಇ ಡಾ. ಸಂಪತಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಯ ಸಮಾರಂಭವನ್ನು 30 ಡಿಸೆಂಬರ್ 2024 ರಂದು ನಿಗದಿಪಡಿಸಲಾಗಿತ್ತು.
ಆದರೆ ಭಾರತದ ಮಾಜಿ ಪ್ರಧಾನಿಗಳಾಗಿದ್ದ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕಾರಣದಿಂದ, ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ 3 ಜನವರಿ, 2025ಕ್ಕೆ ಮರುನಿಗದಿಪಡಿಸಲಾಗಿದೆ.
ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಆಸ್ಪತ್ರೆಯನ್ನು ಶುಕ್ರವಾರ, 3 ಜನವರಿ, 2025 ರಂದು ಮಧ್ಯಾಹ್ನ 4.00 ಗಂಟೆಗೆ ಉದ್ಘಾಟಿಸಲಿದ್ದಾರೆ.
ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದ್ದು, ಅದನ್ನು ಶುಕ್ರವಾರ 3 ಜನವರಿ, 2025 ಎಂದು ತಿಳಿಯಬೇಕು. ಅಲ್ಲದೆ ಸಮಾರಂಭವ ಪ್ರವೇಶ ಪತ್ರವು ಕೂಡ ಆಮಂತ್ರಣ ಪತ್ರಿಕೆಯೇ ಆಗಿರುತ್ತದೆ. ನೀರಿನ ಬಾಟಲ್, ಕೈಚೀಲ, ಛತ್ರಿ, ಮೊಬೈಲ್ ಇನ್ನಿತರ ವಸ್ತುಗಳನ್ನು ನಿಷೇದಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ಆಮಂತ್ರಿತರು ಮಧ್ಯಾಹ್ನ 3.೦೦ ಗಂಟೆಯೊಳಗಾಗಿ ಆಗಮಿಸಲು ಕೋರಲಾಗಿದೆ. ಕೆಎಲ್ಇ ಸಂಸ್ಥೆಯ ಗೌರವಾನ್ವಿತ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
28/12/2024 02:17 pm