ಕಾಗವಾಡ: ಕಳೆದ ಏಳು ವರ್ಷಗಳಿಂದ ನಡೆದ ಯೋಜನೆ ಇನ್ನೇನು ಮುಗಿಯಿತು ಅನ್ನೋವಷ್ಟರಲ್ಲೇ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಎಡವಟ್ಟಿನಿಂದ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆದಾರರ ಮೇಲೆ ಗೂಬೆ ಕೂರಿಸೋ ಅಧಿಕಾರಿಗಳೇ ಇದಕ್ಕೆ ಉತ್ತರ ನೀಡಬೇಕಿದೆ.
ಸುಮಾರು 1363.48 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಇಲ್ಲಿವರೆಗೂ ಅಧಿಕಾರಿಗಳು 82% ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವರದಿ ಸಲ್ಲಿಸಿದೆ. ಈಗಾಗಲೇ 1123 ಕೋಟಿ ರೂ. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಕೇವಲ 18% ಕಾಮಗಾರಿ ನಿಂತಿರುವ ಬಗ್ಗೆ ನಿಗಮಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ, ಕಳೆದ 17 ತಿಂಗಳುಗಳಿಂದ ಸರ್ಕಾರ ಬಸವೇಶ್ವರ ಏತ ನೀರಾವರಿ ಯೋಜನೆಗೆ ಒಟ್ಟು ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುವುದರ ನಿಖರ ಮಾಹಿತಿ ನೀಡದೆ ಅಧಿಕಾರಿಗಳು ಸರ್ಕಾರದ ನ್ಯೂನ್ಯತೆಗಳನ್ನು ಮುಚ್ಚಿಟ್ಟು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಳೆದ 17 ತಿಂಗಳ ಅಧಿಕಾರಾವಧಿಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಗೆ ಕೇವಲ 21 ಕೋಟಿ ಹಣ ಬಿಡುಗಡೆ ಮಾಡಿದ್ದು ಕಾಮಗಾರಿ ವಿಳಂಬಕ್ಕೆ ಮೂಲ ಕಾರಣವಾಗಿದೆ. ಹಾಗಿದ್ರೆ ಸ್ಥಳೀಯ ಶಾಸಕರು ಮಾಡ್ತಿರೋದಾದ್ರು ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದ್ದು, ಇದಕ್ಕೆ ಶಾಸಕ ರಾಜು ಕಾಗೆ ಅವರೇ ಉತ್ತರಿಸಬೇಕಿದೆ.
-ಲಕ್ಷ್ಮಣ ಕೋಳಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕೋಡಿ
PublicNext
27/12/2024 08:05 am