ಬೆಳಗಾವಿ: ಮಾಜಿ ಪ್ರಧಾನಿಗಳು ಮನಮೋಹನ್ ಸಿಂಗ್ ಸ್ವರ್ಗಸ್ಥರಾದ್ರು ಅನ್ನೋದನ್ನ ಕೇಳಿದ ಮೇಲೆ ದಿಗ್ಭ್ರಮೆಯಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಕೆಲಸ ಮಾಡಿದ್ದೇವೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಸರಳ, ಸಜ್ಜನಿಕೆಯ ರಾಜಕಾರಣಿ. ಮಹಾನ್ ಚೇತನ ಅರ್ಥಶಾಸ್ತ್ರಜ್ಞನನ್ನು ಇಂದು ದೇಶ ಕಳೆದುಕೊಂಡಿದೆ. ಅರ್ಥ ಸಚಿವರಾಗಿ ಕಷ್ಟದಲ್ಲಿದ್ದ ದೇಶವನ್ನು ಬಲಿಷ್ಠರನ್ನಾಗಿಸಿದ್ದರು. ಅವರ ಜೊತೆಯಲ್ಲಿ ಕೆಲಸ ಮಾಡಿರುವುದು ನಮ್ಮ ಸೌಭಾಗ್ಯ. ಮನಮೋಹನ್ ಸಿಂಗ್ ಅವರ ನಿಧನದಿಂದ ನನಗೆ ಬಹಳ ನೋವಾಗಿದೆ. ಅವರ ಕುಟುಂಬಕ್ಕೆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.
PublicNext
27/12/2024 01:27 pm