ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮನಮೋಹನ್ ಸಿಂಗ್ ಪ್ರಧಾನಿಯಾದ ಬಳಿಕ ನಮ್ಮ ಸಂಪರ್ಕ ಹತ್ತಿರವಾಯಿತು - ಶಶಿ ತರೂರ್

ಬೆಳಗಾವಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನವು ದುಃಖದ ವಿಚಾರ. ಅವರು ಹಲವು ವರ್ಷಗಳಿಂದ ನನಗೆ ಗೊತ್ತು. ದೊಡ್ಡ ಹುಮ್ಮಸ್ಸಿನಿಂದ ಕೆಲಸ ಮಾಡಿದ್ರು. ದೊಡ್ಡ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಕಾಂಗ್ರೆಸ್‌ನ ಸಂಸದ ಡಾ. ಶಶಿ ತರೂರ್ ಹೇಳಿದ್ದಾರೆ.‌

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಕೆಲಸ ಮಾಡುವಾಗ ಅವರು ಸೌಥ್ ಕಮಿಷನ್ ಅಧ್ಯಕ್ಷರಿದ್ದರು. ಅವರು ಪ್ರಧಾನಿಯಾದ ಬಳಿಕ ನಮ್ಮ ಸಂಪರ್ಕ ಬಹಳ ಹತ್ತಿರವಾಯಿತು. ಸೋನಿಯಾ ಗಾಂಧಿ ಅವರೇ ಮನಮೋಹನ್ ಸಿಂಗ್ ಅವರನ್ನು ರಾಜಕೀಯಕ್ಕೆ ಕರೆತಂದರು. ಅವರು ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಿದರು. ದೇಶದಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಹಾಗೂ ಬದಲಾವಣೆ ಆಯಿತು. ಮನಹೋಹನ್ ಸಿಂಗ್ ಅವರ ಹೃದಯ ಮನಸ್ಸು ದೊಡ್ಡದಿತ್ತು. ದೊಡ್ಡ ವ್ಯಕ್ತಿ ನಮ್ಮ ಬಿಟ್ಟು ಹೋಗಿದ್ದಾರೆ ಎಂದರು.

Edited By : Suman K
PublicNext

PublicNext

27/12/2024 11:33 am

Cinque Terre

26.11 K

Cinque Terre

0

ಸಂಬಂಧಿತ ಸುದ್ದಿ