ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಕಾರು ಬೈಕ್ ಡಿಕ್ಕಿ - ವ್ಯಕ್ತಿ ಸಾವು

ಬೈಲಹೊಂಗಲ: ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದ ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವನು ಗಾಯಗೊಂಡ ಘಟನೆ ಸಮೀಪದ ಬೆಳಗಾವಿ-ಬಾಗಲಕೋಟ ರಾಜ್ಯ ಹೆದ್ದಾರಿಯ ಹಲಕಿ ಕ್ರಾಸ ಹತ್ತಿರ ಗುರುವಾರ ಸಂಜೆ ಜರುಗಿದೆ.

ಮೃತನನ್ನು ತಡಸಲೂರ ಗ್ರಾಮದ ಬೈಕ ಸವಾರ ಉದ್ದಪ್ಪ ಸೋಮಪ್ಪ ಕೆಂಗೇರಿ(60) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರ ಜಿಲ್ಲೆಯ ಇಬ್ರಾಹಿಂಪುರದ ವರುಣ ಮಹಾದೇವಪ್ಪ ಜಮನಾಳ(22), ಶಾಜು ಜೊಸೆಫ(43) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸವಾರನು ಯರಗಟ್ಟಿ ಕಡೆಯಿಂದ ಬೆಳಗಾವಿ ಕಡೆಗೆ ವೇಗದಿಂದ ರಾಂಗ್ ಸೈಡಿನಲ್ಲಿ ಚಲಾಯಿಸುತ್ತಿದ್ದಾಗ ಹಲಕಿ ಕ್ರಾಸ ಬಳಿ ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

27/12/2024 07:54 pm

Cinque Terre

22.4 K

Cinque Terre

0

ಸಂಬಂಧಿತ ಸುದ್ದಿ