ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇನಾ ವಾಹನ ಅಪಘಾತ - ಬೆಳಗಾವಿಯ ಮತ್ತೊಬ್ಬ ಯೋಧ ವೀರಮರಣ

ಬೆಳಗಾವಿ: ಜಮ್ಮು & ಕಾಶ್ಮೀರದ ಪೂಂಚ್‌ನಲ್ಲಿ ಸಂಭವಿಸಿದ ಸೇನಾ ವಾಹನ ಭೀಕರ ಅಪಘಾತದಲ್ಲಿ ಬೆಳಗಾವಿಯ ಓರ್ವ ಯೋಧ ಸೇರಿದಂತೆ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಪೂಂಚ್ ಜಿಲ್ಲೆಯ ಗಡಿನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಒಟ್ಟು ಐವರು ಯೋಧರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಯೋಧರು ಕರ್ನಾಟಕದವರಾಗಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಬೆಳಗಾವಿಯ ಸಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ್ (45), ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಕೋಟೇಶ್ವರದ ಬಿಜಾಡಿಯ ಅನೂಪ್ (33) ಹಾಗೂ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಮಹೇಶ್ ಮರಿಗೊಂಡ (25) ಎಂದು ಗುರುತಿಸಲಾಗಿದೆ.

ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಧಯಾನಂದ ತಿರಕನ್ನವರ (45) ವೀರಮರಣ ಹೊಂದಿದ್ದಾನೆ. ಮರಾಠಾ ಲಘು ಪದಾತಿ ದಳದಲ್ಲಿ (Maratha Light Infantry) ಸೇವೆ ಸಲ್ಲಿಸುತ್ತಿದ್ದ ಧಯಾನಂದ ಅವರ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ಬರಲಿರುವ ಸಾಧ್ಯತೆ ಇದೆ.

Edited By : Vijay Kumar
PublicNext

PublicNext

25/12/2024 01:01 pm

Cinque Terre

12.5 K

Cinque Terre

2

ಸಂಬಂಧಿತ ಸುದ್ದಿ