ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರದ್ದಿ ಪೇಪರ್‌ ಸಂಗ್ರಹಿಸಿಟ್ಟ 5 ಮಳಿಗೆಗಳಿಗೆ ಬೆಂಕಿ

ಬೆಳಗಾವಿ: ಶಾರ್ಟ್ ಸರ್ಕ್ಯೂಟ್‌ನಿಂದ ರದ್ದಿ ಪೇಪರ್‌ ಸಂಗ್ರಹಿಸಿಟ್ಟ ಐದು ಮಳಿಗೆಗಳಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಬೆಳಗಾವಿಯ ಖಂಜರ್‌ಗಲ್ಲಿಯಲ್ಲಿ ನಡೆದಿದೆ

ಮೊದಲೊಂದು ಮಳಿಗೆಗೆ ಬೆಂಕಿ ಹೊತ್ತಿ ನಂತರ ಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಬಬೂ ಇನಾಮದಾರ್, ಮೋಸಿನ್ ಇನಾಮದಾರ್, ಸಾಜೀದ್ ಇನಾಮದಾರ್ ಸೇರಿದ ಮಳಿಗೆಗಳಿಗೆ ಬೆಂಕಿ ಆವರಿಸಿಕೊಂಡಿದೆ. ಭಾರಿ ಪ್ರಮಾಣದ ಬೆಂಕಿ ಕಂಡು ಆತಂಕಕ್ಕೆ ಒಳಗಾದ ಸ್ಥಳೀಯರು ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.‌

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ‌ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಈ ಘಟನೆಯಲ್ಲಿ ಒಂದು ಬೈಕ್, ರೆಷನ್ ಅಂಗಡಿ, ಗ್ಯಾರೇಜ್ ಅಂಗಡಿಗಳಿಗೂ ಹಾನಿಯಾಗಿದೆ.‌ ಲಕ್ಷ್ಯಾಂತರ ‌ರೂಪಾಯಿ ಹಾನಿಯಾಗಿದ್ದರಿಂದ ಸ್ಥಳಕ್ಕೆ ಬೆಳಗಾವಿಯ ಮಾರ್ಕೆಟ್ ‌ಠಾಣೆ ಪೊಲೀಸರ ‌ಭೇಟಿ ನೀಡಿ ಪರಿಶೀಲಿಸಿದ್ದಾರೆ.‌

Edited By : Ashok M
PublicNext

PublicNext

18/12/2024 09:04 am

Cinque Terre

23.89 K

Cinque Terre

0

ಸಂಬಂಧಿತ ಸುದ್ದಿ