ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾರು - ಸಾರಿಗೆ ಬಸ್ ನಡುವೆ ಅಪಘಾತ - ಟ್ರಾಫಿಕ್ ಜಾಮ್

ಬೆಳಗಾವಿ: ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಕಾರು ಮತ್ತು ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಸ್ವಲ್ಪದರಲ್ಲೆ ಭಾರಿ ಅನಾಹುತ ತಪ್ಪಿದೆ.

ಬೆಳಗಾವಿ ಅಶೋಕ ವೃತ್ತದ ಬಳಿ ಬಸ್ ಸಂಚರಿಸುವಾಗ ಏಕಾಏಕಿ ಕಾರು ಅಡ್ಡಿ ಬಂದಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.‌ ಸದ್ಯ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಅಪಘಾತದಿಂದ ಅಶೋಕ ವೃತ್ತದ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರ ಪರದಾಡುವಂತಾಯಿತು.‌ ತಕ್ಷಣ ದೌಡಾಯಿಸಿದ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಕ್ಲೀಯರ್ ಮಾಡಿದರು.‌ ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Ashok M
PublicNext

PublicNext

17/12/2024 10:13 am

Cinque Terre

29.85 K

Cinque Terre

0

ಸಂಬಂಧಿತ ಸುದ್ದಿ